ಕರ್ನಾಟಕ

karnataka

ETV Bharat / state

ದಾಸರಹಳ್ಳಿಗೆ ಹೆಚ್ಚು ವ್ಯಾಕ್ಸಿನ್ ಪೂರೈಸಲು ಆದೇಶ: ಬಿಬಿಎಂಪಿ ಮುಖ್ಯ ಆಯುಕ್ತ

ದಾಸರಹಳ್ಳಿ ಹಾಗೂ ಹೊರವಲಯದ ವಾರ್ಡ್‌ಗಳಲ್ಲಿ ವಲಸೆ ಕಾರ್ಮಿಕರಿದ್ದು, ದಿನಕ್ಕೆ ಒಂದೊಂದು ವಾರ್ಡ್​ಗೂ ಲಸಿಕೆ ಡೋಸ್ ಕೊಡುವಂತೆ ಆದೇಶಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

dasarahalli to recieve more vaccine says bbmp chief commissioner
ಬಿಬಿಎಂಪಿ ಮುಖ್ಯ ಆಯುಕ್ತರ ಪ್ರತಿಕ್ರಿಯೆ

By

Published : Aug 21, 2021, 4:40 PM IST

ಬೆಂಗಳೂರು:ಕೋವಿಡ್ ವಿರುದ್ಧದ ಲಸಿಕೆ ಪಡೆಯುವುದರಿಂದ ಸೋಂಕಿನ ತೀವ್ರತೆ ಕಡಿಮೆಯಾಗಲಿದೆ ಎಂಬುದು ಎಲ್ಲ ತಜ್ಞರ ವಾದ. ಈ ಹಿನ್ನೆಲೆ ವ್ಯಾಕ್ಸಿನ್ ಪೂರೈಕೆ ಕೊರತೆಯಾಗಿದ್ದರೂ, ನಗರದ ಹೊರವಲಯಕ್ಕೆ ವ್ಯಾಕ್ಸಿನ್​ ವಿತರಿಸಲು ಹೆಚ್ಚಿನ ಒತ್ತು ‌ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಪೀಣ್ಯದಲ್ಲಿ ಮಾತನಾಡಿದ ಅವರು, ಲಸಿಕೆ ಸಿಕ್ಕಿದ್ದರೂ, ಲಸಿಕೆ ಆಗದಿದ್ದರೂ ಎಲ್ಲರೂ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಿಸಿಕೊಂಡಿದ್ದರೆ ಕೋವಿಡ್‌ ಸೋಂಕಿತರು ಆಸ್ಪತ್ರೆಗೆ ಸೇರುವವರ ಪ್ರಮಾಣ‌ ಕಡಿಮೆ ಆಗಲಿದೆ. ಲಸಿಕೆ ಆದವರಿಗೂ ಕೋವಿಡ್ ಬರುವ ಸಾಧ್ಯತೆ ಇದೆ. ಆದರೆ, ಐಸಿಯು ಅಗತ್ಯ ಇರುವುದಿಲ್ಲ.‌ ಈ ವರೆಗೆ ಲಸಿಕೆ ಪಡೆದವರು ಐಸಿಯು ಸೇರುವ ಸಂದರ್ಭ ಬಂದಿಲ್ಲ.‌ ಹೀಗಾಗಿ ಲಸಿಕೆ ಪಡೆದ ಬಳಿಕವೂ ಶೇ10 ಜನರಿಗೆ ಕೋವಿಡ್ ಬಂದರೂ, ಆಸ್ಪತ್ರೆ ದಾಖಲು ಪ್ರಮಾಣ ಕಡಿಮೆ‌ ಇದೆ ಎಂದರು.‌

ಬಿಬಿಎಂಪಿ ಮುಖ್ಯ ಆಯುಕ್ತರ ಪ್ರತಿಕ್ರಿಯೆ

ಹೊರವಲಯ ವಾರ್ಡ್​ಗಳಿಗೆ 400 ಲಸಿಕೆ ಡೋಸ್:

ಲಸಿಕೆ ಪೂರೈಕೆ ಹೆಚ್ಚು ಮಾಡುವ ಬಗ್ಗೆ ಭರವಸೆ ಸಿಕ್ಕಿದೆ. ದಾಸರಹಳ್ಳಿ ಹಾಗೂ ಹೊರವಲಯದ ವಾರ್ಡ್‌ಗಳಲ್ಲಿ ವಲಸೆ ಕಾರ್ಮಿಕರಿದ್ದು, ದಿನಕ್ಕೆ ಒಂದೊಂದು ವಾರ್ಡ್​ಗೂ ಲಸಿಕೆ ಡೋಸ್ ಕೊಡುವಂತೆ ಆದೇಶಿಸಲಾಗಿದೆ. ಪ್ರತೀ ದಿನ 70-75 ಸಾವಿರ ಲಸಿಕೆ ಸಿಕ್ಕರೆ ಜನರ ಬೇಡಿಕೆಯಂತೆ ಲಸಿಕೆ ಕೊಡಬಹುದಾಗಿದೆ ಎಂದರು.

ಕೋವಿಡ್ರ‍್ಯಾಂಡಮ್ ಟೆಸ್ಟ್​​ಗೆ ಮುಂದಾದ ಪಾಲಿಕೆ:

ಮಾರುಕಟ್ಟೆ ಅಷ್ಟೇ ಅಲ್ಲದೆ ಜನದಟ್ಟಣೆ ಆಗುವ ಎಲ್ಲಾ ಪ್ರದೇಶಗಳಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಲು ತಂಡಗಳ ರಚನೆ ಆಗಿದೆ. ವ್ಯಾಕ್ಸಿನ್ ಕ್ಯಾಂಪ್​​ಗಳನ್ನೂ ಮಾಡಲಾಗುವುದು ಎಂದರು.

ವ್ಯಾಕ್ಸಿನ್ ಎರಡು ಡೋಸ್ ಪಡೆದವರೂ ಆಕ್ಸಿಜನ್ ಬೆಡ್​ನಲ್ಲಿ!

ಆಘಾತಕಾರಿ ವಿಚಾರ ಎಂದರೆ, 4 ಜನ ಕೋವಿಡ್ ಡಬಲ್ ಡೋಸ್ ವ್ಯಾಕ್ಸಿನ್ ಮುಗಿಸಿದ್ರೂ ಕೂಡ ಆಕ್ಸಿಜನ್ ಬೆಡ್​ನಲ್ಲಿ ಚಿಕಿತ್ಸೆ ಕೊಡಲಾಗುತ್ತೆ. 78 ಮಂದಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 13 ಜನ ಸೆಕೆಂಡ್ ಡೋಸ್ ಪಡೆದವರು ಇದ್ದಾರೆ. 9 ಜನ ಜನರಲ್ ಬೆಡ್​ನಲ್ಲಿದ್ದು, 4 ಜನ ಆಕ್ಸಿಜನ್ ಬೆಡ್​ನಲ್ಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಶೇ.75 ರಷ್ಟು ಜನ ಮೊದಲ ಡೋಸ್ ಪಡೆದಿದ್ದು, ಎರಡನೇ ಡೋಸ್ ಪಡೆದವರು 20 ಶೇಕಡಾದಷ್ಟಿದ್ದಾರೆ.‌ ಶೇ.100 ರಷ್ಟು ಆದಾಗ ಆಸ್ಪತ್ರೆ , ಕ್ರಿಟಿಕಲ್ ಕಂಡೀಷನ್ ತಲುಪುವುದು ತಪ್ಪುತ್ತದೆ ಎಂದರು.

ABOUT THE AUTHOR

...view details