ಕರ್ನಾಟಕ

karnataka

ETV Bharat / state

ಕಬ್ಬನ್​ ಪಾರ್ಕ್​ನಲ್ಲಿ ಇನ್ನೇನು ಬೇಕು? ಕುಂದು ಕೊರತೆ ನೀಗಿಸಲು ಜನರಿಂದಲೇ ಅಭಿಪ್ರಾಯ ಸಂಗ್ರಹ - news kannada

ನಗರದ ಬಹುಮುಖ್ಯ ಆಕರ್ಷಣೆಯ ತಾಣವೆಂದರೆ ಅದು ಕಬ್ಬನ್ ಪಾರ್ಕ್. ಹಾಗಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿನ ಕುಂದುಕೊರತೆಗಳ ಬಗ್ಗೆ ನಿನ್ನೆ ಒಂದು ಸರ್ವೇ ನಡೆಸಲಾಯಿತು.

ಕುಂದುಕೊರತೆಗಳ ಬಗ್ಗೆ ಜನರಿದಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ

By

Published : Apr 29, 2019, 7:54 AM IST

ಬೆಂಗಳೂರು: ಹಸಿರು ಕಾಶಿ ಎಂದು ಕರೆಸಿಕೊಂಡಿರುವ ಕಬ್ಬನ್ ​ಪಾರ್ಕ್​ ನೋಡಲು ನಿತ್ಯ ನೂರಾರು ಜನ ಬರುತ್ತಾರೆ. ಈ ಪಾರ್ಕ್ ಪ್ರೇಮಿಗಳಿಗೆ ಲವ್​​ ಸ್ಪಾಟ್​ ಆದರೆ, ಇನ್ನು ಕೆಲವರಿಗೆ ಅದು ಟೈಂ ಪಾಸ್ ಹಾಗೂ ರಿಲ್ಯಾಕ್ಸ್​ಗೆ ಬೆಸ್ಟ್​ ಪ್ಲೇಸ್​. ಹೊರ ರಾಜ್ಯ ಮಾತ್ರವಲ್ಲದೇ, ದೇಶ-ವಿದೇಶದಿಂದಲೂ ಈ ಪಾರ್ಕ್​ಗೆ ಬರುತ್ತಾರೆ. ‌ಈ ನಿಟ್ಟಿನಲ್ಲಿ ನಿನ್ನೆ ಕಬ್ಬನ್ ಪಾರ್ಕ್ ಅಸೋಸಿಯೇಷನ್​ ಜನರ ಮೂಲಕವೇ ಒಂದು ಸರ್ವೇ ನಡೆಸಲಾಯಿತು.

ಕುಂದುಕೊರತೆಗಳ ಬಗ್ಗೆ ಜನರಿದಲೇ ಜನರಿಗಾಗಿ ಕಬ್ಬನ್ ಪಾರ್ಕ್ ಸರ್ವೇ

ಈ ವೇಳೆ ಕಬ್ಬನ್​ ಪಾರ್ಕ್​ಗೆ ಬರುವ ಪ್ರವಾಸಿಗರಿಗೆ, ನಡಿಗೆದಾರರಿಗೆ, ಸಾರ್ವಜನಿಕರಿಗೆ ಕಾಣುವ ಕುಂದುಕೊರತೆಗಳು,ಅಭಿವೃದ್ಧಿ ಕಾರ್ಯಗಳು, ಅವಶ್ಯಕ - ಅನಾವಶ್ಯಕ ಗಳ ಬಗ್ಗೆ ವರದಿ ಸಂಗ್ರಹಿಸಲಾಯಿತು. ಪಾರ್ಕ್​ನಲ್ಲಿ ನಡೆದ ಸರ್ವೇಯಲ್ಲಿ ಎರಡು ಬ್ಯಾಚ್​​ಗಳನ್ನಾಗಿ ಮಾಡಿ ಜನರಿಂದಲೇ ಮಾಹಿತಿ ಸಂಗ್ರಹಿಸಲಾಯಿತು.

ಇದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಈ ಸರ್ವೇಯಲ್ಲಿ ಭಾಗಿಯಾಗಿದ್ದರು. ಅವರಿಂದ ಬಂದ ಸಂಪೂರ್ಣ ಮಾಹಿತಿಯನ್ನ ಪಾರ್ಕ್​ನ ನಿರ್ದೇಶಕರಿಗೂ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಅಂತ ಪಾರ್ಕ್ ಅಸೋಸಿಯೇಷನ್ ಪ್ರೆಸಿಡೆಂಟ್ ಉಮೇಶ್ ತಿಳಿಸಿದರು.

ABOUT THE AUTHOR

...view details