ಬೆಂಗಳೂರು :ಬೆಳೆ ವಿಮೆಗೆ ನೋಂದಾಯಿತ ಅರ್ಹ ಫಲಾನುಭವಿಗಳು ಮರಣ ಹೊಂದಿದಲ್ಲಿ ಆ ರೈತರುಗಳ ಬೆಳೆವಿಮೆ ಪರಿಹಾರವನ್ನು ಸರಿಯಾದ ವಾರಸುದಾರರಿಗೆ (ನಾಮಿನಿ) ಪಾವತಿಸುವ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಬೇಕು ಹಾಗೂ ನೋಂದಣಿ ಸಮಯದಲ್ಲಿಯೇ ನಾಮಿನಿಯ ಹೆಸರನ್ನು ಸೇರಿಸುವ ಕಾರ್ಯ ತಂತ್ರಾಂಶದ ಮೂಲಕವೇ ಆಗಬೇಕೆಂದು ಕೃಷಿ ಸಚಿವ ಬಿ ಸಿ ಪಾಟೀಲ್ ಸೂಚಿಸಿದ್ದಾರೆ.
ಕೃಷಿ ಸಚಿವ ಬಿ ಸಿ ಪಾಟೀಲ್ ಹೆಬ್ಬಾಳದ ಬೀಜ ನಿಗಮ ಕಚೇರಿಯಲ್ಲಿ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಿಮಾ ಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಸ್ವಂತ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಕಡ್ಡಾಯವಾಗಿ ಎಲ್ಲಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ (Help Desk)ಯನ್ನು ಸ್ಥಾಪಿಸಿ, ರೈತರಿಗೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಕುರಿತು ಜಾಗೃತಿ ಮೂಡಿಸಬೇಕು. ವಿಮಾ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಬೇಕೆಂದು ವಿಮಾ ಕಂಪನಿಗಳಿಗೆ ಸಚಿವರು ಖಡಕ್ ಸೂಚನೆ ನೀಡಿದರು.
ಅಲ್ಲದೇ ಸಭೆಯಲ್ಲಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯ ಜೋಡಣೆ ಹಾಗೂ NPCI Active ಇರುವುದನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಎಲ್ಲಾ ಬ್ಯಾಂಕುಗಳಿಗೆ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಸೂಚಿಸಿದರು.
ಇದನ್ನೂ ಓದಿ:ಒಡಕಿನ ದನಿ ಲಾಭವಾಗಿಸಿಕೊಳ್ಳಲು ಜೆಡಿಎಸ್ ತಂತ್ರ.. ಅಲ್ಪಸಂಖ್ಯಾತ ಮುಖಂಡರಿಗೆ 'ತೆನೆ' ಗಾಳ!?