ಕರ್ನಾಟಕ

karnataka

ETV Bharat / state

ಮಹಾಲಕ್ಷ್ಮಿ ಲೇಔಟ್​ನಲ್ಲಿ ಸುಸಜ್ಜಿತ ಸಿಸಿಸಿ ಕೇಂದ್ರ ಆರಂಭ - ಆಕ್ಸಿಜನ್ ಬೆಡ್ ಸೌಲಭ್ಯವೂ ಲಭ್ಯ

ಮಹಾಲಕ್ಷ್ಮಿ ಲೇಔಟ್​​ನಲ್ಲಿ ಹೊಸದಾಗಿ ಆರಂಭಗೊಂಡಿರುವ 46 ಆಕ್ಸಿಜನ್ ಬೆಡ್ ಸೌಲಭ್ಯ ಕೂಡಾ ಇರುವ ಕೋವಿಡ್ ಕೇರ್ ಸೆಂಟರ್ ಅನ್ನು ಸಚಿವ ಗೋಪಾಲಯ್ಯ ಮತ್ತು ಕೇಂದ್ರ ಸಚಿವ ಸದಾನಂದಗೌಡ ಉದ್ಘಾಟನೆ ಮಾಡಿದ್ರು.

ccc
ccc

By

Published : May 15, 2021, 5:56 PM IST

Updated : May 15, 2021, 10:38 PM IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿ ಒಟ್ಟು 80 ಬೆಡ್ ಸೌಲಭ್ಯವಿರುವ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ಇಲ್ಲಿ 46 ಆಕ್ಸಿಜನ್ ಬೆಡ್ ಸೌಲಭ್ಯ ಸಹ ಇದೆ.

ನಂದಿನಿ ಲೇಔಟ್ ಬಸ್ ನಿಲ್ದಾಣದ ಕೆಂಪೇಗೌಡ ಸಮುದಾಯ ಭವನವನ್ನು ಸಿಸಿಸಿ ಕೇಂದ್ರ ಮಾಡಲಾಗಿದ್ದು, ಕೇಂದ್ರ ಸಚಿವ ಸದಾನಂದ ಗೌಡ , ರಾಜ್ಯ ಅಬಕಾರಿ ಸಚಿವ ಗೋಪಾಲಯ್ಯ ಈ ಸಿಸಿಸಿ‌ ಕೇಂದ್ರಕ್ಕೆ ಚಾಲನೆ ನೀಡಿದರು. ಕೋವಿಡ್ ಕೇರ್ ಸೆಂಟರ್ ಜೊತೆಗೆ 3 ಆ್ಯಂಬುಲೆನ್ಸ್​ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಚಿವರ ಕಚೇರಿಯಲ್ಲಿ ಹೆಲ್ಪ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಗೆ ಐವರು ವೈದ್ಯರ ನೇಮಕ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಈ ಸಿಸಿಸಿ ಕೇಂದ್ರ ಸುಸಜ್ಜಿತ ವ್ಯವಸ್ಥೆಯೊಂದಿಗೆ ಆರಂಭವಾಗಿದ್ದು, ಸಿಸಿಟಿವಿ, ಮನೋರಂಜನೆಗೆ ಟಿವಿ ವ್ಯವಸ್ಥೆಯೂ ಇದೆ. ಅಗತ್ಯ ಬಿದ್ದಲ್ಲಿ ಮನೆಗೇ ಆಕ್ಸಿಜನ್ ನೀಡುವ ವ್ಯವಸ್ಥೆಗೆ ಕೂಡಾ ಇಂದು ಚಾಲನೆ ನೀಡಲಾಯಿತು.

ಮಹಾಲಕ್ಷ್ಮಿ ಲೇಔಟ್​ನಲ್ಲಿ ಸುಸಜ್ಜಿತ ಸಿಸಿಸಿ ಕೇಂದ್ರ ಆರಂಭ - ಆಕ್ಸಿಜನ್ ಬೆಡ್ ಸೌಲಭ್ಯವೂ ಲಭ್ಯ

ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಗೋಪಾಲಯ್ಯನವರು ಈಗಾಗಲೇ ಮೂರು ಆಕ್ಸಿಜನ್ ಮೊಬೈಲ್ ವ್ಯಾನ್​​ಗಳ ಮೂಲಕ ಮನೆಮನೆಗೆ ಅಗತ್ಯ ಇರುವ ರೋಗಿಗಳಿಗೆ ಆಕ್ಸಿಜನ್ ಕೊಡುವ ಕೆಲಸ ಮಾಡ್ತಿದ್ದಾರೆ. ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುವ ಅಗತ್ಯ ಇದೆ. ಆಕ್ಸಿಜನ್ ಜನರೇಟರ್ ಕೂಡಾ ವ್ಯವಸ್ಥೆ ಮಾಡಿದರೆ, ಸೋಂಕಿತರನ್ನು ಬೇರೆ ಕಡೆ ಕಳಿಸದೆ ಇಲ್ಲೇ ಗುಣಪಡಿಸುತ್ತೇನೆ ಎಂದಿದ್ದಾರೆ. ಸಚಿವರ ಪ್ರಯತ್ನಕ್ಕೆ ಅಭಿನಂದಿಸುತ್ತೇನೆ ಎಂದರು.

ನನ್ನ ಕ್ಷೇತ್ರದಲ್ಲಿ ಯಶವಂತಪುರದ ಆಯುರ್ವೇದಿಕ್ ಸೆಂಟರ್​ನಲ್ಲಿ ಸಿಸಿಸಿ ತೆರೆಯಲಾಗಿದ್ದು, ಐಟಿಐ ನಲ್ಲಿ ನೂರು ಹಾಸಿಗೆಗಳ ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ಹೆಚ್​ಎಎಲ್ ನಲ್ಲಿ 80, ಹೆಬ್ಬಾಳ ಹಾಗೂ ಬ್ಯಾಟರಾಯನಪುರ, ದಾಸರಹಳ್ಳಿ, ಮಲ್ಲೇಶ್ವರಂನಲ್ಲಿ ಸಿಸಿಸಿ ಕೇಂದ್ರ ತೆರೆಯಲಾಗಿದೆ ಎಂದರು.

ಬ್ಲಾಕ್ ಫಂಗಸ್​​ಗೆ ಅಗತ್ಯವಿರೋ ಮೆಡಿಸಿನ್ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ರೆಮಿಡಿಸಿವಿರ್ ಸೇರಿದಂತೆ ಅಗತ್ಯ ಮೆಡಿಸಿನ್ ರಾಜ್ಯಕ್ಕೆ ಕೊಡಿಸುವ ಕೆಲ್ಸ ಮಾಡ್ಬೇಕಾಗಿದೆ. ಕೋವಿಡ್ ಹೆಚ್ಚಿರುವ ನಗರಗಳಲ್ಲಿ ಲಾಕ್​ಡೌನ್ ಅಗತ್ಯ ಎಂದು ಐಸಿಎಮ್​ಆರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್ ಡೌನ್ ವೇಳೆ ಕರೋನಾ ಚೈನ್ ಬ್ರೇಕ್ ಆಗುತ್ತದೆ. ಮುಂಬೈ, ಚೆನ್ನೈ, ಬೆಂಗಳೂರು ಸೂಕ್ತ ಉದಾಹರಣೆಗಳು ಕಣ್ಣ ಮುಂದಿವೆ. ಲಾಕ್​ಡೌನ್ ಅಂತ್ಯದ ವೇಳೆಗೆ ಕೊರೊನಾ ಕಂಟ್ರೋಲ್ ಆಗುವ ನಿರೀಕ್ಷೆಯಿದೆ. ಒಂದು ವೇಳೆ ಸೋಂಕು ಕಡಿಮೆ ಆಗದಿದ್ದರೆ ಲಾಕ್​ಡೌನ್ ಮುಂದುವರೆಸಿದ್ರೆ ಸೂಕ್ತ ಎಂದರು.

45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಕೆಲಸ ಆಗ್ತಿದೆ. 18 ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡುವುದಕ್ಕೆ ಕೆಲ ಕಾರಣಗಳಿದ್ದವು. 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್​ಗೆ ಹಿಂದೇಟು ಹಾಕಿದ್ದರಿಂದ 18 ರಿಂದ 44 ರೊಳಗೆ ಕೊಡುವ ತೀರ್ಮಾನ ಮಾಡಲಾಯಿತು ಎಂದರು.

ಇನ್ನು ಸದಾನಂದಗೌಡರು ರಾಜೀನಾಮೆ ನೀಡಬೇಕೆಂದು ಸಿದ್ಧರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲಸ ಇಲ್ಲದವರ ಬಗ್ಗೆ ನಾನೇನು ಮಾತನಾಡಲಿ. ನನಗೆ ಕೋವಿಡ್ ಕಡಿಮೆ ಮಾಡುವ ಕೆಲಸ ಇದೆ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಟೆಸ್ಟಿಂಗ್ ಕಡಿಮೆಯಾಗ್ತಿರೋದಕ್ಕೆ ಸೋಂಕು ಕಡಿಮೆಯಾಗ್ತಿದೆ ಅನ್ನೋದು ಸುಳ್ಳು ಎಂದರು. ಲಾಕ್​ಡೌನ್ ಇದ್ರೂ ಟೆಸ್ಟಿಂಗ್ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ ಎಂದರು. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ವ್ಯಾಕ್ಸಿನ್ ನೀಡಲಾಗ್ತಿದೆ. ಕೆಲ ಕೋವಿಡ್ ಕೇರ್ ಗಳಲ್ಲಿ ಪಿಪಿಇ ಕಿಟ್ ನೀಡದಿರೋ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಲೋಪದೋಷಗಳು ಆಗಿದ್ಯೋ ಎಲ್ಲಾ ಸರಿಪಡಿಸಲಾಗುವುದು ಎಂದರು.‌

Last Updated : May 15, 2021, 10:38 PM IST

ABOUT THE AUTHOR

...view details