ಬೆಂಗಳೂರು: ಮುಖ್ಯಮಂತ್ರಿ ನಿವಾಸ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಪ್ರವೇಶ ನಿರ್ಬಂಧಿಸಿ ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಸಿಎಂ ನಿವಾಸ, ಕಚೇರಿಗೆ ಸ್ಯಾನಿಟೈಸ್: ಬಿಎಸ್ವೈ, ಸಿಬ್ಬಂದಿ ಸೇರಿ ಸೋಂಕಿತರ ಸಂಖ್ಯೆ 11ಕ್ಕೇರಿಕೆ!
ಇಂದು ಸಿಎಂ ನಿವಾಸದ ಅಡುಗೆ ಮಾಡುವ ವ್ಯಕ್ತಿ, ಚಾಲಕ ಸೇರಿದಂತೆ 9 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಿಎಸ್ವೈ ಸೇರಿ ಸೋಂಕಿತರ ಸಂಖ್ಯೆ 11 ಕ್ಕೆ ಹೆಚ್ಚಳ
ಗೃಹ ಕಚೇರಿ ಕೃಷ್ಣಾ ಮತ್ತು ಅಧಿಕೃತ ನಿವಾಸ ಕಾವೇರಿ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಹೊರಗಡೆಯಿಂದ ಪ್ರವೇಶ ನಿರ್ಬಂಧಿಸಲಾಗಿದ್ದು, ಸಿಎಂ ಕುಟುಂಬ ಸದಸ್ಯರು, ಸಿಬ್ಬಂದಿ ಹಾಗೂ ರಜೆ ಮೇಲೆ ಇರುವ ಸಿಬ್ಬಂದಿಯನ್ನೂ ಕೂಡ ಕರೆಸಿ ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುತ್ತಿದೆ.
ಇಂದು ಸಿಎಂ ನಿವಾಸದ ಕುಕ್, ಕಾರು ಚಾಲಕ ಸೇರಿದಂತೆ 9 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮುಖಾಂತರ ಸಿಎಂ ಮಗಳು ಹಾಗೂ ಸಿಎಂ ಸೇರಿ 11 ಜನರಿಗೆ ಕೊರೊನಾ ಆವರಿಸಿದೆ. ಕೊರೊನಾ ಪರೀಕ್ಷೆ ಮುಂದುವರೆದಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ.