ಬೆಂಗಳೂರು: ಎಪಿಎಂಸಿ ನೌಕರನಿಗೆ ಬಂದ ಕೊರೊನಾ ಇದೀಗ ಅವರ ಮನೆಯವರಿಗೂ ಹರಡಿದೆ. P - 2764 (48 ವರ್ಷ) ವ್ಯಕ್ತಿಗೆ ಮೇ 29 ರಂದು ಕೊರೊನಾ ಲಕ್ಷಣ ಕಂಡು ಬಂದು ಆಸ್ಪತ್ರೆ ದಾಖಲಾಗಿದ್ದರು. ಇದೀಗ ಅವರ ಪತ್ನಿ, ಮಗ ಹಾಗೂ ತಂಗಿ ಮಗಳಿಗೂ ಕೊರೊನಾ ಸೋಂಕು ತಗುಲಿದೆ. ಆತನ ಪ್ರಾಥಮಿಕ ಸಂಪರ್ಕವಾದ್ದರಿಂದ ಅವರನ್ನು ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಕೊರೊನಾ ಸೋಂಕಿತ ಎಪಿಎಂಸಿ ನೌಕರನಿಂದ ಹೆಚ್ಚಿದ ಆತಂಕ: ಮನೆಯ ಮೂವರಿಗೆ ಸೋಂಕು
ಕೊರೊನಾ ಸೋಂಕಿತ ಎಪಿಎಂಸಿ ನೌಕರನಿಂದ ಅವರ ಮನೆಯ ಮೂರು ಜನರಿಗೆ ಸೋಂಕು ತಗುಲಿದೆ. ಇಂದು ಮಧ್ಯಾಹ್ನದ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಸೋಂಕಿತ ಎಪಿಎಂಸಿ ನೌಕರ
ಇಂದು ಮಧ್ಯಾಹ್ನದ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಪಿಎಂಸಿ ಆನೇಕಲ್ಗೆ ಶಿಫ್ಟ್ ಆಗಿರುವುದರಿಂದ, ಅಲ್ಲಿ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 48 ವರ್ಷದ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಇದ್ದ ಕಾರಣ, ಇಎಸ್ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಪರೀಕ್ಷೆ ಮಾಡಿದಾಗ ಕೊರೊನಾ ದೃಢಪಟ್ಟಿತ್ತು. ಅನಾರೋಗ್ಯವಿದ್ದರೂ ಕೆಲಸಕ್ಕೆ ಹೋದ ಕಾರಣ ಸೋಂಕು ಇನ್ನಷ್ಟು ಜನರಿಗೆ ಹರಡಿರುವ ಸಾಧ್ಯತೆ ಇದೆ.