ಕರ್ನಾಟಕ

karnataka

By

Published : Jul 18, 2020, 6:09 PM IST

ETV Bharat / state

ಬಿಬಿಎಂಪಿ ಸಂಪರ್ಕಾಧಿಕಾರಿ, ಐವರು ಮಾರ್ಷಲ್​ಗಳಿಗೆ ಕೊರೊನಾ

ಮಾಸ್ಕ್ ಧರಿಸದವರಿಗೆ, ಅನಗತ್ಯ ಓಡಾಡುತ್ತಿರುವವರನ್ನು ಹಿಡಿದು ದಂಡ ವಿಧಿಸುತ್ತಿದ್ದ, ಓಡಾಡಿ ಕೆಲಸ ನಿರ್ವಹಿಸುತ್ತಿದ್ದ ಪಾಲಿಕೆಯ ಐವರು ಮಾರ್ಷಲ್​ಗಳಿಗೆ ಕೊರೊನಾ ಬಂದಿದ್ದು, ಕೋವಿಡ್ ಕೇರ್ ಸೆಂಟರ್ ಜಿಕೆವಿಕೆಗೆ ದಾಖಲಿಸಲಾಗಿದೆ.

ಬಿಬಿಎಂಪಿ ಸಂಪರ್ಕಾಧಿಕಾರಿ, ಐವರು ಮಾರ್ಷಲ್​ಗಳಿಗೆ ಕೊರೊನಾ
ಬಿಬಿಎಂಪಿ ಸಂಪರ್ಕಾಧಿಕಾರಿ, ಐವರು ಮಾರ್ಷಲ್​ಗಳಿಗೆ ಕೊರೊನಾ

ಬೆಂಗಳೂರು: ನಾಗರಿಕ ಸೇವೆ ನೀಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹೆಚ್ಚೆಚ್ಚು ಕೊರೊನಾ ಬಾಧಿಸುತ್ತಿದೆ. ಬಿಬಿಎಂಪಿ ಪಿಆರ್ ಒ (ಸಂಪರ್ಕಾಧಿಕಾರಿ) ಯಾಗಿದ್ದ ಸುರೇಶ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತನ್ನ ಜೊತೆ ಕೆಲಸದ ನಿಮಿತ್ತ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷಿಸಿಕೊಳ್ಳಲು ತಿಳಿಸಿದ್ದಾರೆ. ಕಳೆದ ಐದು ದಿನದಿಂದ ಕರ್ತವ್ಯಕ್ಕೆ ಗೈರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ರಿಪೋರ್ಟ್ ಪಾಸಿಟಿವ್ ಬಂದಿದೆ. ಇದಲ್ಲದೆ ಮಾಸ್ಕ್ ಧರಿಸದವರಿಗೆ, ಅನಗತ್ಯ ಓಡಾಡುತ್ತಿರುವವರನ್ನು ಹಿಡಿದು ದಂಡ ವಿಧಿಸುತ್ತಿದ್ದ, ಓಡಾಡಿ ಕೆಲಸ ನಿರ್ವಹಿಸುತ್ತಿದ್ದ ಪಾಲಿಕೆಯ ಐವರು ಮಾರ್ಷಲ್​ಗಳಿಗೆ ಕೊರೊನಾ ಬಂದಿದ್ದು, ಕೋವಿಡ್ ಕೇರ್ ಸೆಂಟರ್ ಜಿಕೆವಿಕೆಗೆ ದಾಖಲಿಸಲಾಗಿದೆ.

ಕೆ.ಆರ್.ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು, ಗಂಗೇನಹಳ್ಳಿ, ಕೊಡಿಗೆಹಳ್ಳಿ, ರಾಜಮಹಲ್ ಗುಟ್ಟಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಸೋಂಕು ಹರಡಿದೆ. ನಾಲ್ವರು ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

ABOUT THE AUTHOR

...view details