ಬೆಂಗಳೂರು: ಕರುನಾಡಿನಲ್ಲಿ ಕೊರೊನಾ ಎಮರ್ಜೆನ್ಸಿ ಇದ್ದು, ಒಂದು ವಾರಗಳ ಕಾಲ ಮಾಲ್, ಥೀಯೆಟರ್ಗಳಿಂದ ಹಿಡಿದು ಬಹುತೇಕ ಕಡೆಗಳಲ್ಲಿ ಬೀಗ ಜಡಿಯಲಾಗಿದೆ.
ಇತ್ತ ಜನರು ಕೂಡ ಸ್ವಯಂ ಮುಂಜಾಗ್ರತೆಗೆ ಮುಂದಾಗಿದ್ದು, ಹಲವು ಜಾಗಗಳು ಬಣಗುಡುತ್ತಿವೆ. ಅಂದಹಾಗೆ, ನಗರದ ಹಲವು ಪಾರ್ಕ್ಗಳಿಗೆ ಬೀಗ ಹಾಕಲಾಗಿದೆ.

ಬೆಳಗ್ಗೆ ಆದರೆ ವಾಕಿಂಗ್ ಜಾಗಿಂಗ್ ಅಂತ ಬ್ಯುಸಿ ಇರ್ತಿದ್ದವರಿಗೆ ಗೇಟ್ ಹೊರಗೆ ಬೋರ್ಡ್ ನೋಡಿಕೊಂಡು ಹೋಗುವಂತ ವಾತಾವರಣ ನಿರ್ಮಾಣವಾಗಿದೆ. ಬಿಟಿಎಂ ಲೇಔಟ್ನಲ್ಲಿ ಇರುವ ಪಾರ್ಕ್ಗೆ ಬೀಗ ಹಾಕಲಾಗಿದ್ದು, ಪಾರ್ಕ್ ಹೊರಗೆ ನೋಟಿಸ್ ಬೋರ್ಡ್ ಹಾಕಲಾಗಿದೆ. ಕೊರೊನಾ ವೈರಸ್ನಿಂದಾಗಿ ಪಾರ್ಕ್ ಒಂದು ವಾರ ಕ್ಲೋಸ್ ಇರಲಿದೆ ಎಂದು ನಮೂದಿಸಲಾಗಿದೆ.
ಇತ್ತ ದೇವಾಲಯಗಳಿಗೂ ಎಮರ್ಜೆನ್ಸಿ ಎಫೆಕ್ಟ್ ಇದ್ದು, ನಗರದ ದೇವಸ್ಥಾನಗಳತ್ತ ಜನರು ಸುಳಿಯುತ್ತಿಲ್ಲ. ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನಗರದ ವಯ್ಯಾಲಿಕಾವಲ್ನಲ್ಲಿರುವ ಟಿಟಿಡಿ ದೇವಾಲಯದಲ್ಲಿ ಭಕ್ತರೇ ಇಲ್ಲದೇ ಇರುವುದು ಕಂಡು ಬಂತು. ಪ್ರತಿ ಶನಿವಾರ ದೇವರ ದರ್ಶನ ಮಾಡಲು ಕ್ಯೂ ನಿಲ್ಲುತ್ತಿದ್ದ ಜನರು, ಇಂದು ಕಡಿಮೆ ಸಂಖ್ಯೆಯಲ್ಲಿ ಇರುವುದು ಕಂಡುಬಂತು.