ಬೆಂಗಳೂರು : ರಾಜ್ಯದಲ್ಲಿ 3ನೇ ಅಲೆಗೆ ಕೋವಿಡ್ ಅಂತ್ಯವಾಗಲಿದ್ಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, ಈ ಅಲೆಗೆ ಕೋವಿಡ್ ಮುಗಿದಿದೆ ಅಂತಾ ತಿಳಿದುಕೊಂಡಿದ್ದೇನೆ. ಆದರೆ, ನಮ್ಮ ಎಚ್ಚರದಿಂದ ನಾವು ಇರಬೇಕಾಗುತ್ತೆ.
ಸರ್ಕಾರವೂ ವಿಶ್ವದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆಯ ಬಗ್ಗೆ ಗಮನ ಇಟ್ಟಿದೆ. ಆದರೆ, ಯಾರೆಲ್ಲ ಎರಡು ಡೋಸ್ ಲಸಿಕೆಯನ್ನ ತೆಗೆದುಕೊಂಡಿಲ್ಲವೋ ಲಸಿಕೆ ತೆಗೆದುಕೊಳ್ಳಿ. ಮೂರನೇ ಡೋಸ್ಗೆ ಅರ್ಹರಿರುವವರು ತೆಗೆದುಕೊಳ್ಳಲು ಮನವಿ ಮಾಡಿದರು.
ಮೂರನೇ ಅಲೆಯಲ್ಲಿ ಪಾಸಿಟಿವ್ ರೇಟು ಶೇ.2ಕ್ಕಿಂತ ಕಡಿಮೆ ಬಂದಿದ್ದು ದಿನೇದಿನೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿಂದು 73,286 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು ಅದರಲ್ಲಿ 1,405 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,29,642ಕ್ಕೆ ಏರಿಕೆ ಆಗಿದೆ.
ಪಾಸಿಟಿವ್ ದರವೂ 1.91% ರಷ್ಟಿದೆ. ಇತ್ತ 5,762 ಸೋಂಕಿತರು ಗುಣಮುಖರಾಗಿದ್ದು, ಈತನಕ 38,63,085 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 26,832 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ 26 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,691 ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 765 ಮಂದಿಗೆ ಸೋಂಕು ದೃಢಪಟ್ಟಿದೆ. 6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,780 ಏರಿಕೆಯಾಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 11 ಸಾವಿರದಷ್ಟಿವೆ.
ರೂಪಾಂತರಿ ವೈರಸ್ ಅಪ್‌ಡೇಟ್ಸ್ :
ಅಲ್ಪಾ- 156