ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2015ನೇ ಬ್ಯಾಚ್ನ ಪದವಿ ಪ್ರಧಾನ ಸಮಾರಂಭ ಫ್ರಂಟ್ ಹೈ ಸ್ಕೂಲ್ ಗ್ರೌಂಡ್ನಲ್ಲಿ ನಡೆಯಿತು.
ವಿವಿಧ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಿದ 19 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪದವಿ ಪ್ರಧಾನ ಮಾಡಲಾಯಿತು.
ಪದವಿ ಪ್ರಧಾನ ಮಾಡಿದ ಬಳಿಕ ಮಾತಾನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಶೇ.85 ರಷ್ಟು ಕರ್ನಾಟಕದ ವಿದ್ಯಾರ್ಥಿಗಳು ಇದ್ರೆ, ಶೇ.15 ರಷ್ಟು ಹೊರ ರಾಜ್ಯದವರು ಇದ್ದು, ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದು ಪೂರ್ವ ಜನ್ಮದ ಪುಣ್ಯ. ಪರಿಣಾಮ ಇಂದು 250 ವೈದ್ಯರು ವೈದ್ಯಕೀಯ ಜಗತ್ತಿಗೆ ಸೇರ್ಪಡೆ ಆಗಿದ್ದೀರಾ. ಇಂದು ವೈದ್ಯರು ಆಗಬೇಕು ಅನ್ನೋ ನಿಮ್ಮ ಆಯ್ಕೆ ಸಫಲ ಆಗಿದೆ. ಆದರೆ ಇದು ಅಂತ್ಯವಲ್ಲ, ಸಾಧಿಸೋದು ಬಹಳ ಇದೆ. ಹೆಣ್ಣು ಮಕ್ಕಳು ಎಲ್ಲರಲ್ಲೂ ಮುಂದೆ ಇದ್ದು, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ, ಅದು ಹಾಗೆಯೇ ಮುಂದುವರೆಯಲಿ ಎಂದು ತಿಳಿಸಿದರು.
ಚಿನ್ನದ ಪದಕ ಪಡೆದವರು:
*ಫಸ್ಟ್ ಇಯರ್
1) ಅರುಣ್ ಕುಮಾರ್ . ಆರ್
2) ಸುಭಾಷ್ ಅರವಿಂದ್ ಜಿ
3) ರವಿ ತೇಜ ಯಾದವ್ ಬಿ ವಿ ಎನ್
4) ವಿದ್ಯಾ ಪ್ರಸಾದ್
*ಸೆಕೆಂಡ್ ಇಯರ್
5) ವಿದ್ಯಾ ಪ್ರಸಾದ್
6) ಕಾವ್ಯ ಶಿವನಗೌಡ ಪಾಟೀಲ್
7) ಯಶವಂತ್ ಎಂ
8) ಅದಿತಿ ಕೆ ಮೂರ್ತಿ ಮತ್ತು ಸಾಗರ್ ವಿ