ಕರ್ನಾಟಕ

karnataka

ETV Bharat / state

ನಮ್ಮ ಎಚ್ಚರಿಕೆಗೆ ಬೆಲೆ ಕೊಟ್ಟಿದ್ದರೆ ಅಮಾಯಕರು ಕೋವಿಡ್​​ಗೆ ಬಲಿಯಾಗುತ್ತಿರಲಿಲ್ಲ: ಕಾಂಗ್ರೆಸ್ - ಕಾಂಗ್ರೆಸ್ ಟ್ವೀಟ್​

ಕೊರೊನಾ ಹೆಸರಿನಲ್ಲಿ ದೇಶದ ಅಸಂಘಟಿತ ಆರ್ಥಿಕತೆ ಮೇಲೆ 3ನೇ ದಾಳಿ ನಡೆದಿದೆ. ಲಾಕ್​ಡೌನ್ ಕೊರೊನಾ ವಿರುದ್ಧದ ದಾಳಿ ಅಲ್ಲ. ಅದು ದೇಶದ ಜನರ ಮೇಲಿನ ದಾಳಿ. ಯುವ ಸಮೂಹದ ಭವಿಷ್ಯದ ಮೇಲಿನ ದಾಳಿ. ಕಾರ್ಮಿಕರು, ರೈತರ ಮೇಲಿನ ದಾಳಿ. ಇದನ್ನು ಅರ್ಥ ಮಾಡಿಕೊಂಡು, ಈ ದಾಳಿಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದು ಕಾಂಗ್ರೆಸ್​ ಅಭಿಪ್ರಾಯಪಟ್ಟಿದೆ.

Congress
ಕಾಂಗ್ರೆಸ್

By

Published : Sep 9, 2020, 3:41 PM IST

ಬೆಂಗಳೂರು: ಕೊರೊನಾ ಮಹಾಮಾರಿ ದಾಳಿಯ ಆರಂಭದಲ್ಲೇ ನಾವು ನೀಡಿದ ಮುನ್ನೆಚ್ಚರಿಕೆ ಪಾಲಿಸಿದ್ದರೆ ರಾಜ್ಯದಲ್ಲಿ ಅಮಾಯಕರ ಸಾವು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗುತ್ತಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೋವಿಡ್​ನ ಅಪಾಯಗಳ ಬಗ್ಗೆ ಕಾಂಗ್ರೆಸ್ ಆರಂಭದಲ್ಲೇ ಮುನ್ಸೂಚನೆ ನೀಡಿ ಅಗತ್ಯ ಸಲಹೆ ನೀಡಿದ್ದರೂ, ರಾಜ್ಯ ಬಿಜೆಪಿ ಸರ್ಕಾರ ಅವುಗಳನ್ನು ಪರಿಗಣಿಸದೆ ಭ್ರಷ್ಟಾಚಾರದಲ್ಲಿ ಮುಳುಗಿ ನಿರ್ಲಕ್ಷ್ಯ ವಹಿಸಿದೆ. ಅಗತ್ಯಕ್ಕೆ ಅನುಗುಣವಾಗಿ ವೈದ್ಯರು, ಸಿಬ್ಬಂದಿಯನ್ನು ನೇಮಿಸಲು ಸಾಧ್ಯವಾಗದೆ ರಾಜ್ಯದಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ದೂರಿದೆ.

ಕೊರೊನಾ ಹೆಸರಿನಲ್ಲಿ ದೇಶದ ಅಸಂಘಟಿತ ಆರ್ಥಿಕತೆ ಮೇಲೆ 3ನೇ ದಾಳಿ ನಡೆದಿದೆ. ಲಾಕ್​ಡೌನ್ ಕೊರೊನಾ ವಿರುದ್ಧದ ದಾಳಿ ಅಲ್ಲ. ಅದು ದೇಶದ ಜನರ ಮೇಲಿನ ದಾಳಿ. ಯುವ ಸಮೂಹದ ಭವಿಷ್ಯದ ಮೇಲಿನ ದಾಳಿ. ಕಾರ್ಮಿಕರು, ರೈತರ ಮೇಲಿನ ದಾಳಿ. ಇದನ್ನು ಅರ್ಥ ಮಾಡಿಕೊಂಡು, ಈ ದಾಳಿಯ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಖಂಡಿಸಿರುವ ಕಾಂಗ್ರೆಸ್, 2021ರಲ್ಲಿ ಭಾರತದ ಆರ್ಥಿಕತೆ ಶೂನ್ಯಕ್ಕಿಂತಲೂ ಕೆಳಗಿಳಿದು ಶೇ. 10.5ಕ್ಕೆ ಕುಸಿಯಲಿದೆ ಎಂದು ಫಿಚ್ ರೇಟಿಂಗ್ ಅಂದಾಜು ಮಾಡಿದೆ. ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರತಿಗಾಮಿ ಆರ್ಥಿಕ ನೀತಿಗಳು, ದೂರದೃಷ್ಟಿಯ ಕೊರತೆ, ಅಸಮರ್ಥತೆಯೇ ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ABOUT THE AUTHOR

...view details