ಕರ್ನಾಟಕ

karnataka

ETV Bharat / state

ಎರಡು ಕ್ಷೇತ್ರ ಬಾಕಿ ಉಳಿಸಿಕೊಂಡು 18 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅಭ್ಯರ್ಥಿಗಳ ಪಟ್ಟಿಯನ್ನು ದಿಲ್ಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

By

Published : Mar 24, 2019, 1:15 AM IST

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಿಂದ ಸ್ಪರ್ಧಿಸುವ 18 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆ ಮಾಡಿದೆ.

ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಮತ್ತು ಹುಬ್ಬಳ್ಳಿ ಧಾರವಾಡ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಪ್ರಕಟಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅಭ್ಯರ್ಥಿಗಳ ಪಟ್ಟಿಯನ್ನು ದಿಲ್ಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಹಾಲಿ ಶಾಸಕರಿಗೆ ಟಿಕೆಟ್:
ಕಾಂಗ್ರೆಸ್ ಪಕ್ಷ ಈ ಸಾರಿ ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಈಶ್ವರ್ ಖಂಡ್ರೆ ಹಾಗೂ ರಿಜ್ವಾನ್ ಅರ್ಷದ್ ಟಿಕೆಟ್ ನೀಡಿದೆ. ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ, ಬೀದರ್​ನಿಂದ ಈಶ್ವರ್ ಖಂಡ್ರೆ ಹಾಗೂ ಬೆಂಗಳೂರು ಕೇಂದ್ರದಿಂದ ರಿಜ್ವಾನ್ ಅರ್ಷದ್ ಸ್ಪರ್ಧೆಗಿಳಿದಿದ್ದಾರೆ.

ಕ್ಷೇತ್ರವಾರು ಅಭ್ಯರ್ಥಿಗಳ ವಿವರ ಇಂತಿದೆ:
1. ಚಿಕ್ಕೋಡಿ ಕ್ಷೇತ್ರ- ಪ್ರಕಾಶ್ ಹುಕ್ಕೇರಿ
2. ಬೆಳಗಾವಿ- ವಿರೂಪಾಕ್ಷಿ ಎಸ್ ಸಾಧುನವರ್
3. ಬಾಗಲಕೋಟೆ -ವೀಣಾ ಕಾಶಪ್ಪನವರ್
4. ಕಲಬುರ್ಗಿ -ಮಲ್ಲಿಕಾರ್ಜುನ ಖರ್ಗೆ
5. ರಾಯಚೂರು- ಬಿ ವಿ ನಾಯಕ್
6. ಬೀದರ್ - ಈಶ್ವರ್ ಖಂಡ್ರೆ
7. ಕೊಪ್ಪಳ -ರಾಜಶೇಖರ ಹಿಟ್ನಾಳ್
8. ಬಳ್ಳಾರಿ- ವಿ ಎಸ್ ಉಗ್ರಪ್ಪ
9. ಹಾವೇರಿ- ಡಿ ಆರ್ ಪಾಟೀಲ್
10. ದಾವಣಗೆರೆ- ಶಾಮನೂರು ಶಿವಶಂಕರಪ್ಪ
11. ದಕ್ಷಿಣ ಕನ್ನಡ - ಮಿಥುನ್ ರೈ
12. ಚಿತ್ರದುರ್ಗ- ಬಿ ಎನ್ ಚಂದ್ರಪ್ಪ
13. ಮೈಸೂರು- ಡಾ ವಿಜಯ್ ಶಂಕರ್
14. ಚಾಮರಾಜನಗರ- ಆರ್ ಧ್ರುವನಾರಾಯಣ
15. ಬೆಂಗಳೂರು ಗ್ರಾಮಾಂತರ - ಡಿ ಕೆ ಸುರೇಶ್
16. ಬೆಂಗಳೂರು ಕೇಂದ್ರ -ರಿಜ್ವಾನ್ ಅರ್ಷದ್
17. ಚಿಕ್ಕಬಳ್ಳಾಪುರ - ಡಾ ಎಂ ವೀರಪ್ಪ ಮೊಯ್ಲಿ
18. ಕೋಲಾರ- ಕೆಎಚ್ ಮುನಿಯಪ್ಪ

ABOUT THE AUTHOR

...view details