ಕರ್ನಾಟಕ

karnataka

ETV Bharat / state

ಸಂಗಮೇಶ್ ಅಮಾನತು ರದ್ದುಗೊಳಿಸಿ, ಇಲ್ಲದಿದ್ದರೆ ನಮ್ಮೆನ್ನೆಲ್ಲಾ ಅಮಾನತು ಮಾಡಿ : ಸಿದ್ದರಾಮಯ್ಯ ಪಟ್ಟು - ಸದನದಿಂದ ಶಾಸಕ ಸಂಗಮೇಶ ಅಮಾನತು

ಭದ್ರಾವತಿ ಶಾಸಕ ಸಂಗಮೇಶ್​​ರನ್ನು ಸದನದಿಂದ ಅಮಾನತು ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್​ ಸದಸ್ಯರು, ಸದನದ ಬಾವಿಗಳಿದು ಧರಣಿ ನಡೆಸಿದರು. ಅಮಾನತು ಆದೇಶ ಹಿಂಪಡೆಯಿರಿ, ಇಲ್ಲದಿದ್ದರೆ ಎಲ್ಲರನ್ನು ಅಮಾನತು ಮಾಡಿ ಎಂದು ಪಟ್ಟು ಹಿಡಿದರು.

Congress Protest at Assembly opposing suspension of MLA Sangamesh
ಶಾಸಕ ಸಂಗಮೇಶ್ ಅಮಾನತು ವಿರೋಧಿಸಿ ಕಾಂಗ್ರೆಸ್​ ಧರಣಿ

By

Published : Mar 4, 2021, 7:19 PM IST

Updated : Mar 4, 2021, 9:09 PM IST

ಬೆಂಗಳೂರು : ಮಧ್ಯಾಹ್ನದ ಬಳಿಕನೂ ಶಾಸಕ ಸಂಗಮೇಶ್ ಅಮಾನತು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಸಂಗಮೇಶ್ ಅಮಾನತು ರೂಲಿಂಗ್ ಹಿಂದಕ್ಕೆ ಪಡೆಯಿರಿ. ಇಲ್ಲವೇ ನಮ್ಮನ್ನೆಲ್ಲಾ ಅಮಾನತು ಮಾಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ನೀವು ಏಕಾಏಕಿ‌ ಅಮಾನತು ಮಾಡಿದ್ದು ಸರಿಯೇ?. ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಅವಕಾಶವಿದೆ. ಚರ್ಚೆಯ ನಂತರ ನೀವು ಕ್ರಮಕೈಗೊಳ್ಳಬಹುದು. ಆದರೆ ಮೊದಲೇ ನೀವು ನಿರ್ಧಾರ ತೆಗೆದುಕೊಂಡ್ರೆ ಹೇಗೆ? ಎಂದು ಸ್ಪೀಕರ್ ಕಾಗೇರಿಗೆ ಪ್ರಶ್ನಿಸಿದರು.

ಅಮಾನತು ಮಾಡಿದ್ದನ್ನು ನಾವು ಸಹಿಸಿಕೊಳ್ಳಬೇಕಾ?. ನಮ್ಮೆಲ್ಲರನ್ನೂ ಅಮಾನತು ಮಾಡಿ. ಇದು ಹಿಟ್ಲರ್ ಆಡಳಿತವಲ್ಲ. ನಿಯಮಬಾಹಿರವಾಗಿ ಅಮಾನತು ಮಾಡಲಾಗಿದೆ. ಸರ್ವಾಧಿಕಾರ ಧೋರಣೆಗೆ ಧಿಕ್ಕಾರ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಅಧಿವೇಶನ

ಓದಿ : ಲೋಕಸಭೆ, ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ: ಸಿಎಂ ಯಡಿಯೂರಪ್ಪ

ಒಂದು ದೇಶ‌ ಒಂದು ಚುನಾವಣೆ ವಿಷಯ ಚರ್ಚೆಗೆ ತಂದಿದ್ದೀರಿ. ಯಾವ ನಿಯಮದಲ್ಲಿ ಅದನ್ನು ಚರ್ಚೆ ಮಾಡಿಸುತ್ತಿದ್ದೀರ? ಈ ಪ್ರಶ್ನೆಯನ್ನು ನಾನು ಕೇಳಿದ್ದೇನೆ. ನಿಮ್ಮ ಈ ಚರ್ಚೆ ಎಲ್ಲದಕ್ಕೂ ಅನ್ವಯವಾಗುತ್ತಾ?. ಜಿಲ್ಲೆ, ತಾಲೂಕು‌ ಪಂಚಾಯತ್​ ಚುನಾವಣೆಗಳು ಬರ್ತಿವೆ. ಅದಕ್ಕೂ ನಿಮ್ಮ ಒಂದು ದೇಶ ಒಂದು ಚುನಾವಣೆ ಅನ್ವಯವಾಗುತ್ತಾ?. ಹೆಚ್.ಕೆ. ಪಾಟೀಲ್ ಕ್ರಿಯಾ ಲೋಪ ಎತ್ತಿದ್ದಾರೆ. ಕ್ರಿಯಾ ಲೋಪ ಎತ್ತಿದ ಮೇಲೆ ಅವಕಾಶ ಕೊಡಬೇಕು. ಆದರೆ, ನೀವು ಏಕಾಏಕಿ ಭಾಷಣ ಓದೋಕೆ ಆರಂಭಿಸಿದ್ದೀರಿ. ಇದೇ ವೇಳೆ ಸಂಗಮೇಶ್ ಧರಣಿ ಮಾಡಿದ್ರು. ಅವರ ಮನೆಯ ಏಳು ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಅನ್ಯಾಯವಾಗಿದೆ. ಅದನ್ನು ಪ್ರಸ್ತಾಪಿಸಲು ಇಲ್ಲಿ ಹಾಗೆ ಮಾಡಿದ್ದಾರೆ ಎಂದು ಸಂಗಮೇಶ್ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದರು.

ಧರಣಿ ನಿರತ ಕಾಂಗ್ರೆಸ್ ಸದಸ್ಯರ ವಿರುದ್ಧ ಸಿಎಂ ಗರಂ:ಧರಣಿ ನಿರತ ಕಾಂಗ್ರೆಸ್ ಸದಸ್ಯರ ವಿರುದ್ಧ ಗರಂ ಆದ ಸಿಎಂ ಯಡಿಯೂರಪ್ಪ, ಯಾಕೆ ಧರಣಿ ಮಾಡ್ತೀರಿ?. ನಿಮಗೆ ಏನು ಅನ್ಯಾಯ ಆಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೈ ಸದಸ್ಯರು, ಸಂಗಮೇಶ್ ಅಮಾನತು ವಾಪಸ್ ಪಡೆಯಿರಿ‌ ಎಂದು ಆಗ್ರಹಿಸಿದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಸಿಎಂ, ಸ್ಪೀಕರ್ ಅವರಿಗೆ ಅಧಿಕಾರ ಇಲ್ವಾ?. ಅಶಿಸ್ತು ತೋರಿದ್ರೆ ಅಮಾನತು ಮಾಡುವ ಅಧಿಕಾರ ಇಲ್ವಾ?. ಧರಣಿಗೆ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಬೆಂಬಲಿಸುವುದು ಎಷ್ಟು ಸರಿ?. ಇಂಥದ್ದನ್ನೆಲ್ಲ ಪ್ರತಿಪಕ್ಷ ನಾಯಕರು ಬೆಂಬಲಿಸ್ತಾರೆ ಅಂದರೆ ನಾಚಿಕೆ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್​ ಬಗ್ಗೆ ಮಾತಾಡೋಕ್ಕೆ ಕಾಂಗ್ರೆಸ್​ನವರಿಗೆ ಏನು ಹಕ್ಕಿದೆ?. ನಾವು ಆರೆಸ್ಸೆಸ್​ನವರೇ ಏನೀಗ?. ಹೌದು, ನಾವು ಆರೆಸ್ಸೆಸ್​ ಎಂದು ವಿಧಾನಸಭೆಯಲ್ಲಿ ಗುಡುಗಿದರು.

ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ :ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಜೆಡಿಎಸ್ ಸದಸ್ಯರೂ ವಿರೋಧ ವ್ಯಕ್ತಪಡಿಸಿದರು. ಕಲಾಪದಲ್ಲಿ ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಜೆಡಿಎಸ್ ವಿರೋಧ ಇದೆ ಎಂದು ಹೇಳಿದ ಶಾಸಕ ಬಂಡೆಪ್ಪ ಕಾಶೆಂಪೂರ್, ನಾವು ಚರ್ಚೆ ವಿರೋಧಿಸಿ ಸಭಾತ್ಯಾಗ ಮಾಡ್ತೀವಿ ಎಂದು ಸದನದಿಂದ ಹೊರನಡೆದರು. ಸದನದಲ್ಲಿ ಗದ್ದಲ ಕೋಲಾಹಲ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ವಿಧಾನಸಭೆ ಕಲಾಪವನ್ನು ನಾಳೆಗೆ ಮುಂದೂಡಿದರು.

Last Updated : Mar 4, 2021, 9:09 PM IST

ABOUT THE AUTHOR

...view details