ಕರ್ನಾಟಕ

karnataka

ETV Bharat / state

‘ಜನಧ್ವನಿ’ಯಲ್ಲಿ ಬಿಜೆಪಿ ಸರ್ಕಾರದ ನೀತಿ ವಿರುದ್ಧ ಕಾಂಗ್ರೆಸ್​​ ನಾಯಕರ ಗುಡುಗು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನಗರದಲ್ಲಿಂದು ಕಾಂಗ್ರೆಸ್​​​​ ಜನಧ್ವನಿ ಕಾರ್ಯಕ್ರಮ ನಡೆಸಿದೆ. ಈ ವೇಳೆ ಕೈ​ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Congress protest against BJP govt several policies in Bangalore
‘ಜನಧ್ವನಿ’ಯಲ್ಲಿ ಬಿಜೆಪಿ ಸರ್ಕಾರದ ನೀತಿಯ ವಿರುದ್ಧ ಕಾಂಗ್ರೆಸ್​​ ನಾಯಕರ ಗುಡುಗು

By

Published : Aug 20, 2020, 4:34 PM IST

ಬೆಂಗಳೂರು:ರಾಜ್ಯ ಸರ್ಕಾರದ ನಿಲುವು, ಕೈಗೊಳ್ಳುತ್ತಿರುವ ನಿರ್ಧಾರಗಳ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ರೇಸ್​​​​ಕೋರ್ಸ್​​ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿಂದು ಹಮ್ಮಿಕೊಂಡಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜೀವ್ ಗಾಂಧಿ ಹಾಗೂ ದೇವರಾಜು ಅರಸು ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಎಲ್ಲ ಯೋಜನೆಗಳು ಜನಪರವಾಗಿವೆ. ಈಗ ಬಿಜೆಪಿಯವರು, ಜನ ವಿರೋಧಿ, ರೈತ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂದು ಅರಸು ಪ್ರತಿಮೆಗೆ ಬಿಜೆಪಿ ನಾಯಕರು ಮಾಲಾರ್ಪಣೆ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಜನಧ್ವನಿ ಹೋರಾಟ ವೇದಿಕೆ

ರೈತ ಸಂಘಟನೆ, ಪ್ರತಿಪಕ್ಷಗಳ ಜೊತೆ ಚರ್ಚೆ ಮಾಡದೇ, ಕಾಯ್ದೆಗೆ ಸುಗ್ರೀವಾಜ್ಞೆ ತಂದಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಪ್ರಾರಂಭಿಸಿದ್ದೇವೆ. ಕೊರೊನಾ ಹಾವಳಿ ಇರುವುದರಿಂದ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ನಾವು ಪ್ರತಿಭಟನೆ ಮುಂದುವರಿಸುತ್ತೇವೆ. ಸದನದ ಒಳಗೂ ಹಾಗೂ ಹೊರಗೂ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, 10 ಸಾವಿರ ಬೆಡ್ ಮಾಡುತ್ತೇನೆ ಎಂದಿದ್ರಿ. ಎಲ್ಲಿ ಮಾಡಿದ್ದೀರಿ? ಅಲ್ಲಿ 15 ರೋಗಿಗಳಿಗೆ ಒಬ್ಬ ಡಾಕ್ಟರ್ ಕೊಡುತ್ತೇನೆ ಅಂತಾರೆ. ಕೋವಿಡ್​ ಕೇಂದ್ರದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಸರ್ಕಾರ ಜನದ್ರೋಹಿ ಕೆಲಸ ಮಾಡುತ್ತಿದೆ ಆರೋಪಿಸಿದರು.

ಬಳಿಕ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮಾತನಾಡಿ, ಸರ್ಕಾರದ ತಪ್ಪುಗಳನ್ನು ಹೇಳಿದರೆ ಬಿಜೆಪಿಯವರು 10 ಜನ ಟೀಮ್ ಮಾಡಿಕೊಂಡು ಮುಗಿ ಬೀಳುತ್ತಾರೆ. ಇವರಿಗೆ ತಪ್ಪುಗಳನ್ನು ಹೇಳಿದರೆ ಆಗಲ್ಲ. ದೇವರಾಜ್ ಅರಸು ಅವರು ಎಲ್ಲವನ್ನು ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ರಾಜಕೀಯದಲ್ಲಿ ಹೊಸತನ ತಂದವರು ರಾಜೀವ್ ಗಾಂಧಿ. ಭೂ ಸುಧಾರಣಾ ಕಾಯ್ದೆ ವಿರುದ್ಧ ಜನಾಂದೊಲನ ಪ್ರಾರಂಭವಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಮಾತನಾಡಿ, ದೇವರಾಜ್ ಅರಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಅರ್ಹತೆ ಬಿಜೆಪಿಗರಿಗಿಲ್ಲ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಜನರಿಗೆ, ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜೀವ್ ಗಾಂಧಿ ಅವರು ಎರಡೂ ಧರ್ಮಕ್ಕೆ ಪೂಜೆ ಮಾಡಲು ಅವಕಾಶ ಕೊಡಿಸಿದ್ರು. ಮುಚ್ಚಿದ ದೇವಸ್ಥಾನವನ್ನು ತೆರೆಸಿದ್ದರು. ಈಗ ಒಬ್ಬ ಪ್ರಧಾನಿ ಅವರು ಹೋಗಿ ನಾನೇ ರಾಮ ಮಂದಿರ ನಿರ್ಮಾಣ ಮಾಡುತ್ತೇನೆ ಎಂದು ಹೇಳುತ್ತಾರೆ. ದೇಶ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಸಾಧನೆ ಹಲವಾರು ಇವೆ. ಮೋದಿ ಅವರೆ ತಾಕತ್ತಿದ್ದರೆ ಭಾರತವನ್ನು ಬಲಿಷ್ಠ ಮಾಡಿ, ಧರ್ಮ ರಕ್ಷಣೆ ಮಾಡುವುದಕ್ಕೆ ಧರ್ಮ ಗುರುಗಳು ಇದ್ದಾರೆ ಎಂದು ಕಿಡಿಕಾರಿದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ರಾಜೀವ್ ಗಾಂಧಿ ಅವರು ಕಂಪ್ಯೂಟರ್ ದೇಶಕ್ಕೆ ಪರಿಚಯಿಸಿದ್ದಾಗ ಬಿಜೆಪಿ ವಿರೋಧಿಸಿದ್ರು. ಈಗ ನೋಡಿದ್ರೆ ನಾವು ಮಾಡಿದ್ದು ಅಂತ ಹೇಳುತ್ತಾರೆ. ದೇವರಾಜ್ ಅರಸ್ ಅವರು ಬಡ ಜನರಿಗೆ ಅಧಿಕಾರ ಸಿಗಬೇಕೆಂದು ಹೇಳಿದ್ದರು. ಅವರು ಧ್ವನಿ ಇಲ್ಲದವರಿಗೆ ಧ್ವನಿ ನೀಡಿ ಅಧಿಕಾರ ಕೊಟ್ಟರು ಎಂದಿದ್ದಾರೆ.

ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ಮಾತನಾಡಿ, ಬಡಜನರ ಹಣವನ್ನು ಸರ್ಕಾರ ಲೂಟಿ ಮಾಡುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸುಳ್ಳು ಕೊರೊನಾ ದಾಖಲೆ ಸೃಷ್ಟಿ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ ಎಂದರು.

ABOUT THE AUTHOR

...view details