ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಗಳಿಗೆ 2ನೇ ಹಂತದ ಭೇಟಿಗೆ ಹೊರಟ ದಿನೇಶ್ ಗುಂಡೂರಾವ್ - ಕಾಂಗ್ರೆಸ್

ಕಾಂಗ್ರೆಸ್​ ನಾಯಕ ದಿನೇಶ್ ಗುಂಡೂರಾವ್ ಅವರು ನೆರೆ ಪೇಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಲೋಚನೆ ನಡೆಸುವ ಕಾರ್ಯ ನಡೆಸುತ್ತಿದ್ದು, ಇಂದು ಎರಡನೇ ಹಂತದಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ

Dinesh gundu rao

By

Published : Aug 16, 2019, 4:28 AM IST

ಬೆಂಗಳೂರು:ಕಳೆದ ವಾರ ಹುಬ್ಬಳ್ಳಿ ಸುತ್ತಮುತ್ತ ಮಳೆಯಿಂದಾದ ಹಾನಿಯನ್ನು ವೀಕ್ಷಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎರಡನೇ ಹಂತದಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇವರ ಅಧಿಕೃತ ಪ್ರವಾಸ ಆರಂಭವಾಗಲಿದ್ದು, ಹಾಸನದ ಸಕಲೇಶಪುರಕ್ಕೆ ಭೇಟಿ ಕೊಡಲಿದ್ದಾರೆ. ಬೆಂಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಬೆಳಗ್ಗೆ 9ಗಂಟೆಗೆ ಹಾಸನದ ಸಕಲೇಶಪುರ ಹಾಗೂ ಬೇಲೂರು ಭಾಗದಲ್ಲಿ ಮಳೆಯಿಂದಾಗಿರುವ ಅನಾಹುತ ವೀಕ್ಷಣೆ ಮಾಡಲಿದ್ದು, ಸ್ಥಳೀಯರೊಂದಿಗೆ ಸಮಾಲೋಚಿಸಿ ಸಮಸ್ಯೆ ಆಲಿಸಲಿದ್ದಾರೆ.

ಅಂದು ಮಧ್ಯಾಹ್ನ 12ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಗೋಣಿಬೀಡು, ಬಂಕಲ್ ಹಾಗೂ ಜಾವಳಿ ಮತ್ತಿತರ ಕಡೆ ಸಂಚರಿಸಿ ಜನರ ಅಹವಾಲು ಆಲಿಸಲಿದ್ದಾರೆ. ಬಳಿಕ ಆ.19 ರಂದು ಶಿವಮೊಗ್ಗ ಜಿಲ್ಲೆಯ ರಾಜೀವ್ ಗಾಂಧಿ ಬಡಾವಣೆ, ಚಿಕ್ಕಾಲ, ಅಂಗಳಯ್ಯನ ಏರಿ, ಬಾಪೂಜಿ ನಗರ ಹಾಗೂ ಕುಂಬರಗುಂಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಜನರಿಂದ ಸಮಸ್ಯೆಯ ಮಾಹಿತಿ ಪಡೆಯಲಿದ್ದಾರೆ.

ABOUT THE AUTHOR

...view details