ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನವರು ಸಾಂವಿಧಾನಿಕ ಹುದ್ದೆಗೆ ಅಪಮಾನ ಮಾಡಿದ್ದಾರೆ: ಪಿ ರಾಜೀವ್

ಪೇ ಸಿಎಂ ಅಭಿಯಾನ ನಾವೇ ಮಾಡಿದ್ದು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್​ ಸಂವಿಧಾನದ ಹುದ್ದೆಗೆ ಅವಮಾನ ಮಾಡಿದೆ. ಅವರು ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದು ಶಾಸಕ ಪಿ ರಾಜೀವ್​ ಹೇಳಿದ್ದಾರೆ.

P Rajiv
ಶಾಸಕ ಪಿ ರಾಜೀವ್

By

Published : Sep 22, 2022, 5:34 PM IST

ಬೆಂಗಳೂರು: ಕಾಂಗ್ರೆಸ್​ನವರು ಸಂವಿಧಾನದ ಹುದ್ದೆಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಕರ್ನಾಟಕ ತನ್ನದೇ ಆದ ತತ್ವ, ಮೌಲ್ಯ, ರಾಜಕೀಯ ಬದ್ಧತೆಗೆ ಹೆಸರು ಹೊಂದಿರುವ ರಾಜ್ಯವಾಗಿದೆ. ಕಾಂಗ್ರೆಸ್ ಅಧಃಪತನದ ಹಿನ್ನೆಲೆ ಪಲಾಯನ ಮಾಡುವ ಕೆಲಸ ಮಾಡುತ್ತಿದೆ ಎಂದು ಕುಡುಚಿ ಶಾಸಕ ಪಿ ರಾಜೀವ್ ಹೇಳಿದ್ದಾರೆ.

ವಿಧಾನಸೌಧ ಕೆಂಗಲ್ ಗೇಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೇ ಸಿಎಂ ಅಭಿಯಾನ ನಾವೇ ಮಾಡಿದ್ದು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸ್ವತಃ ಅವರೆ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ನೀಚತನದ ಕುಮ್ಮಕ್ಕು ಎಂದು ಸಾಬೀತಾಗಿದೆ. ನೀವು ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದೀರಾ. ಕಾಂಗ್ರೆಸ್ ಪಕ್ಷ ಭೇಷರತ್ ಕ್ಷಮೆ ಕೋರಬೇಕು ಎಂದು ಪಿ ರಾಜೀವ್ ಆಗ್ರಹಿಸಿದರು.

ಶಾಸಕ ಪಿ ರಾಜೀವ್

ಬಿಜೆಪಿಯವರಿಗೆ ಧಮ್ ಇಲ್ಲ: ಇಬ್ರಾಹಿಂ ವಕ್ಫ್ ಬೋರ್ಡ್ ಆಸ್ತಿ ತನಿಖೆ ವಿಚಾರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಜೆಪಿಯವರಿಗೆ ಧಮ್ ಇಲ್ಲ. ಐಎಂಎ ಕೇಸ್​ಗೆ ಯಾರು‌ ಜವಾಬ್ದಾರರು? ಯಾಕೆ ಯಾರನ್ನೂ ಹಿಡಿಯಲಿಲ್ಲ. ಅಮಾನತ್ ಬ್ಯಾಂಕ್ ಹಗರಣ ಯಾಕೆ ಹೊರಬರಲಿಲ್ಲ. ಸಹಕಾರ ಸಂಘ ನಿಮ್ಮ ಕೈಯಲ್ಲಿಯೇ ಇದೆ. ಯಾಕೆ ಏನೂ ಕ್ರಮ ಜರುಗಿಸಲಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಈ ರೀತಿ ಪೋಸ್ಟರ್​ ಹಾಕಲಾಗಿದೆ: ಸಿಎಂ

ನಮ್ಮ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿ. ಚಿಕ್ಕಪ್ಪನ ಮಕ್ಕಳಿಗೆ ಒಂದು ಜೈಲು, ದೊಡ್ಡಪ್ಪನ ಮಕ್ಕಳನ್ನು ಇನ್ನೊಂದು ಜೈಲಿಗೆ ಹಾಕ್ತೇವೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ABOUT THE AUTHOR

...view details