ಬೆಂಗಳೂರು: ಎಐಸಿಸಿಯಿಂದ ಮಾಜಿ ಸಚಿವ ರೋಷನ್ ಬೇಗ್ ಸಸ್ಪೆಂಡ್ ಹಿನ್ನೆಲೆ ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಪಕ್ಷದಿಂದ ಅಮಾನತು ಮಾಡಿದ್ದಕ್ಕೆ ರೋಷನ್ ಬೇಗ್ ಬೆಂಬಲಿಗರು ಕಳೆದ ರಾತ್ರಿಯಿಂದಲೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶಿವಾಜಿನಗರದ ರೋಷನ್ ಬೇಗ್ ಮನೆಗೆ ಆಗಮಿಸಿದ ಬೆಂಬಲಿಗರು ಭೇಟಿಗೆ ಪ್ರಯತ್ನ ಮಾಡಿದ್ದಾರೆ.
ರೋಷನ್ ಬೇಗ್ ಅಮಾನತಿಗೆ ಬೆಂಬಲಿಗರು ಗರಂ - kannadanews
ಎಐಸಿಸಿಯಿಂದ ಮಾಜಿ ಸಚಿವ ರೋಷನ್ ಬೇಗ್ ಸಸ್ಪೆಂಡ್ ಆದ ಹಿನ್ನೆಲೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರೋಷನ್ ಬೇಗ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಸ್ಪೆಂಡ್ ಮಾಡಬೇಕಿರೋರನ್ನ ಮಾಡ್ತಿಲ್ಲ. ಶಾಸಕರಾದ ನಾಗೇಂದ್ರ, ರಮೇಶ್ ಜಾರಕಿಹೊಳಿ, ಅವರ ಬೆಂಬಲಿಗ ಶಾಸಕರು ಸಾಕಷ್ಟು ಮಂದಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ನಾವು ಅಲ್ಪಸಂಖ್ಯಾತರು ಅಂತ ಹೀಗೆ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ಪಾರ್ಟಿಯಿಂದ ರಾಹುಲ್ ಗಾಂಧಿ ಮಾಡಿಸ್ತಿಲ್ಲ. ಇದನ್ನ ಮಾಡಿಸ್ತಿರೋದು ರಾಜ್ಯ ಸಮ್ಮಿಶ್ರ ಸರ್ಕಾರ ಎಂದು ಆರೋಪಿಸಿದ್ದಾರೆ. ಸಿಎಲ್ಪಿ ನಾಯಕರ ಬಗ್ಗೆ ರೋಷನ್ ಬೇಗ್ ಮಾತನಾಡಿದ್ರು. ಅದಕ್ಕೆ ಹೀಗೆಲ್ಲಾ ಮಾಡಸ್ತಿದ್ದಾರೆ. ಪ್ರಭಾವಿ ಅಲ್ಪಸಂಖ್ಯಾತ ನಾಯಕನನ್ನ ತುಳಿಯುವ ಪ್ರಯತ್ನ ಮಾಡ್ತಿದ್ದಾರೆ. 40 ವರ್ಷದಿಂದ ಸಾಕಷ್ಟು ಹಗರಣಗಳು ಆಗಿವೆ. ದಿನೇಶ್ ಗುಂಡೂರಾವ್ ಅವ್ರೆಲ್ಲಾ ಸೇರಿ ಹೀಗೆ ಮಾಡ್ತಿದ್ದಾರೆ. ನಮ್ಮ ಸಾಹೇಬ್ರು ತಪ್ಪು ಮಾಡಿದ್ರೆ ಸಿಬಿಐ ತನಿಖೆಗೆ ಒತ್ತಾಯ ಮಾಡ್ತಿರಲಿಲ್ಲ. ಈ ಪ್ರಕರಣವನ್ನ ಅವರೇ ತನಿಖೆಗೆ ನೀಡಿ ಅಂದಿದ್ದಾರೆ.
ನಮ್ಮವರ ತಲೆ ದಂಡವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಬೇಗ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ದಿಢೀರ್ ನಿರ್ಧಾರದಿಂದ ರೋಷನ್ ಬೇಗ್ ಕೂಡ ವಿಚಲಿತರಾಗಿದ್ದಾರೆ. ಮಾಧ್ಯಮಗಳನ್ನ ಕಂಡು ಮನೆಯೊಳಗೆ ಹೋದ ರೋಷನ್ ಬೇಗ್, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿನ್ನೆ ತಡರಾತ್ರಿ 12ರ ನಂತರ ಅವರು ನಿವಾಸಕ್ಕೆ ಆಗಮಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆ ಹೆಚ್ಚಿದೆ.