ಕರ್ನಾಟಕ

karnataka

By

Published : Jun 27, 2019, 5:34 AM IST

ETV Bharat / state

ಇವಿಎಂ ನಿಷೇಧಿಸಿ, ಮತಪತ್ರ ಜಾರಿಗೊಳಿಸಿ: ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಪತ್ರ ಚಳುವಳಿ

ಭಾರತ ಪ್ರಜಾಪ್ರಭುತ್ವವುಳ್ಳ ದೊಡ್ಡ ದೇಶ. ದೇಶದಲ್ಲಿ ಇವಿಎಂ ಗಿಂತ ಮತಪತ್ರ ಬಳಕೆ ಮಾಡಬೇಕು ಎಂದು ಆಗ್ರಹಿಸಿ  ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರಾಷ್ಟ್ರಪತಿಯವರಿಗೆ ಪತ್ರ ಬರೆದು ಕಳಿಸಿದರು.

ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಪತ್ರ ಚಳುವಳಿ

ಬೆಂಗಳೂರು:ಇವಿಎಂ ನಿಷೇಧಿಸಿ, ಮತಪತ್ರ ಬಳಕೆ ಜಾರಿಗೊಳಿಸುವಂತೆ ಒತ್ತಾಯಿಸಿ ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಮಹಿಳಾ ಕಾಂಗ್ರೆಸ್ ಸದಸ್ಯರು ಪತ್ರ ಚಳುವಳಿ ನಡೆಸಿದರು.

ಇವಿಎಂ ನಿಷೇಧಿಸಿ, ಮತಬಳಕೆ ಜಾರಿಗೊಳಿಸುವಂತೆ ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಪತ್ರ ಚಳುವಳಿ

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಡೆದ ಪತ್ರ ಚಳುವಳಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರಾಷ್ಟ್ರಪತಿಯವರಿಗೆ ಪತ್ರ ಬರೆದು ಕಳಿಸಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ, ಭಾರತ ಪ್ರಜಾಪ್ರಭುತ್ವವುಳ್ಳ ದೊಡ್ಡ ದೇಶ. ದೇಶದಲ್ಲಿ ಇವಿಎಂ ಗಿಂತ ಮತಪತ್ರ ಬಳಕೆ ಮಾಡಬೇಕು. ಮುಂದುವರಿದ ದೇಶಗಳಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆಸಲಾಗುತ್ತಿದೆ. ಇವಿಎಂ ಚುನಾವಣೆಯಲ್ಲಿ ಅನೇಕ ದೋಷಗಳು ಕಂಡು ಬಂದಿವೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಅಂದ್ರೆ ದೇಶದಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿದರು.

ಇದೇ ಹಿನ್ನೆಲೆ ರಾಷ್ಟ್ರಪತಿಗಳಿಗೆ ಪತ್ರ ಚಳುವಳಿ ಮೂಲಕ ಮನವಿ ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ 1 ಲಕ್ಷ ಪತ್ರ ಚಳುವಳಿ ಹಮ್ಮಿಕೊಂಡಿದ್ದೇವೆ. ಈ ಮೂಲಕ ದೇಶದಲ್ಲಿ ಮತಪತ್ರದ ಮೂಲಕ ಚುನಾವಣೆಗೆ ಕಾಂಗ್ರೆಸ್ ಮಹಿಳಾ ಘಟಕ ಒತ್ತಾಯಿಸುತ್ತಿದೆ ಎಂದರು.

For All Latest Updates

TAGGED:

ABOUT THE AUTHOR

...view details