ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ನಿಕ್ಕಿ: ಏಪ್ರಿಲ್​ 10 ರ ಬಳಿಕ ಪ್ರಕಟ ಸಾಧ್ಯತೆ - ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳ ಪಟ್ಟಿ

ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್​ ಆದ ಬಳಿಕ ಕಾಂಗ್ರೆಸ್​ ತನ್ನ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಿದೆ. ಇದನ್ನು ಏಪ್ರಿಲ್ 10 ರ ಬಳಿಕ ಘೋಷಿಸಲಿದೆ ಎನ್ನಲಾಗ್ತಿದೆ.

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ

By

Published : Apr 1, 2023, 7:00 AM IST

ಬೆಂಗಳೂರು:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸಿದ್ಧಪಡಿಸಿದೆ. ಮೊದಲ ಪಟ್ಟಿಯಲ್ಲಿ 124 ಸ್ಫರ್ಧಾಳುಗಳನ್ನು ಘೋಷಿಸಿದ್ದ ಸ್ಕ್ರೀನಿಂಗ್ ಕಮಿಟಿ ಉಳಿದ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿದೆ. ಅಂತಿಮ‌ ಪಟ್ಟಿ ಏ.10 ರ ಬಳಿಕ ಪ್ರಕಟವಾಗಲಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಒಂದೇ ಬಾರಿಗೆ ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಮೂರ್ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ, ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಊಹಾಪೋಹಗಳ ಬಗ್ಗೆ ಚರ್ಚೆ ಬೇಡ ಎಂದರು.

ಸಿದ್ದರಾಮಯ್ಯಗೆ ಕೋಲಾರ ಸಿಗುತ್ತಾ?:ರಾಜ್ಯ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಎರಡನೇ ಪಟ್ಟಿಯನ್ನು ಎಐಸಿಸಿಗೆ ಶಿಫಾರಸು ಮಾಡಿದೆ. ರಾಹುಲ್ ಗಾಂಧಿ ಅವರು ಕೋಲಾರ ಸಮಾವೇಶಕ್ಕೆ ಆಗಮಿಸಿದ ಬಳಿಕ ಎರಡನೇ ಪಟ್ಟಿ ಪ್ರಕಟಿಸಲಾಗುವುದು. ಏ.10 ರ ಬಳಿಕ ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ಎರಡನೇ ಪಟ್ಟಿಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಭಾವ್ಯ ಎರಡನೇ ಕ್ಷೇತ್ರ. ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರದಲ್ಲಿ ಟಿಕೆಟ್ ಪಡೆದಿರುವ ಪ್ರತಿಪಕ್ಷ ನಾಯಕ, ಕೋಲಾರ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಕೋಲಾರ ಟಿಕೆಟ್ ನೀಡುವಂತೆ ಹೈಕಮಾಂಡ್​ಗೂ ಮನವಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಕೋಲಾರ ಪ್ರವಾಸ:ವರುಣಾದಿಂದ ಟಿಕೆಟ್​ ನಿಕ್ಕಿಯಾಗಿರುವ ಮಧ್ಯೆಯೇ ಸಿದ್ದರಾಮಯ್ಯ ಅವರು ಇಂದುಕೋಲಾರ ಪ್ರವಾಸ ನಡೆಸಲಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏ.9 ರಂದು ಕೋಲಾರದಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಅವರ ಸಮಾವೇಶಕ್ಕಾಗಿ ಸ್ಥಳ ಪರಿಶೀಲನೆ ಹಾಗೂ ಪೂರ್ವಭಾವಿ ಸಭೆ ನಡೆಸಲು ಸಿದ್ದರಾಮಯ್ಯ ಅಲ್ಲಿಗೆ ತೆರಳಲಿದ್ದಾರೆ.

ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್:ಎರಡನೇ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಎನ್ನಲಾಗಿದೆ. ಐದಾರು ಕ್ಷೇತ್ರಗಳ ಬಗ್ಗೆ ಸ್ವಲ್ಪ ಗೊಂದಲ ಇದ್ದು, ಈ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ‌ಪುಲಕೇಶಿನಗರ, ಸಿ.ವಿ. ರಾಮನ್ ನಗರ ಸೇರಿದಂತೆ ಕೆಲ ಕ್ಷೇತ್ರಗಳ ಬಗ್ಗೆ ಗೊಂದಲ ಇದೆ ಎಂದು ಮೂಲಗಳು ತಿಳಿಸಿವೆ.

ಶಿಫಾರಸು ಮಾಡಿದ ಸಂಭಾವ್ಯರ ಪಟ್ಟಿ ಹೀಗಿದೆ

  • ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
  • ಗೋಕಾಕ್- ಅಶೋಕ್ ಪೂಜಾರಿ
  • ಕಿತ್ತೂರು- ಡಿ‌.ಬಿ.ಇಮಾನ್ದಾರ್
  • ಮುದೋಳ್ -ಆರ್ .ಬಿ .ತಿಮ್ಮಾಪುರ
  • ತೇರದಾಳ- ಉಮಾಶ್ರೀ
  • ಬೀಳಗಿ- ಜಗದೀಶ್ ಪಾಟೀಲ್
  • ಬಾದಾಮಿ - ಭೀಮಸೇನ ಚಿಮ್ಮನಕಟ್ಟಿ
  • ಸಿಂದಗಿ- ಅಶೋಕ್ ಮನಗೂಳಿ
  • ಗುರುಮಠ್ಕಲ್ - ಬಾಬುರಾವ್ ಚಿಂಚನಸೂರ್
  • ಕಲಬುರಗಿ ದಕ್ಷಿಣ - ಅಲ್ಲಮ್ ಪ್ರಭು ಪಾಟೀಲ್
  • ಬಸವಕಲ್ಯಾಣ - ವಿಜಯ ಸಿಂಗ್
  • ರಾಯಚೂರು - ಎನ್.ಎಸ್ ಬೋಸರಾಜ್
  • ಮಾನ್ವಿ- ಹಂಪಯ್ಯ ನಾಯಕ್
  • ಸಿಂಧನೂರು- ಹಂಪನಗೌಡ ಬಾದರ್ಲಿ
  • ಗಂಗಾವತಿ- ಇಕ್ಬಾಲ್ ಅನ್ಸಾರಿ
  • ಕಲಘಟಗಿ- ಸಂತೋಷ ಲಾಡ್
  • ಹುಬ್ಬಳ್ಳಿ -ಧಾರವಾಡ ಪಶ್ಚಿಮ- ಮೋಹನ್ ಲಿಂಬಿಕಾಯಿ
  • ಮಂಗಳೂರು ದಕ್ಷಿಣ- ಲೋಬೋ
  • ಶಿರಸಿ- ಭೀಮಣ್ಣ ನಾಯ್ಕ್
  • ಹರಿಹರ- ರಾಮಪ್ಪ
  • ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
  • ಮೂಡಿಗೆರೆ- ನಯನಾ ಮೋಟಮ್ಮ
  • ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ
  • ಕಡೂರು- ವೈ ಎಸ್ ವಿ ದತ್ತಾ
  • ಕೋಲಾರ- ಸಿದ್ದರಾಮಯ್ಯ
  • ಗುಬ್ಬಿ - ಶ್ರೀನಿವಾಸ್
  • ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್
  • ಯಲಹಂಕ- ಕೇಶವ್ ರಾಜಣ್ಣ
  • ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ
  • ಸಿವಿ ರಾಮನ್ ನಗರ- ಸಂಪತ್ ರಾಜ್
  • ಪದ್ಮನಾಭ ನಗರ- ಪಿ.ಜಿ.ಆರ್ ಸಿಂಧ್ಯಾ
  • ಬೊಮ್ಮನಹಳ್ಳಿ- ಉಮಾಪತಿಗೌಡ
  • ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ( ಬೆಂಬಲ)
  • ಮದ್ದೂರು- ಉದಯ್ ಗೌಡ
  • ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ
  • ಅರಸೀಕೆರೆ- ಶಿವಲಿಂಗೇಗೌಡ
  • ಪುತ್ತೂರು- ಶಕುಂತಲಾ ಶೆಟ್ಟಿ
  • ಯಲ್ಲಾಪುರ-ಬಿ.ಎಸ್.ಪಾಟೀಲ

ಓದಿ:ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ವೈಶಿಷ್ಟ್ಯಗಳೇನು ಗೊತ್ತಾ?

ABOUT THE AUTHOR

...view details