ಕರ್ನಾಟಕ

karnataka

ETV Bharat / state

ಕೋವಿಡ್ ಅಕ್ರಮ ಆರೋಪ; ಶಾಸಕ‌ ಯತ್ನಾಳ್ ಹೇಳಿಕೆ ಪಡೆಯುವಂತೆ ಲೋಕಾಯುಕ್ತಕ್ಕೆ ದೂರು

ಕೋವಿಡ್​ ಅವಧಿಯಲ್ಲಿ ಅವ್ಯವಹಾರ ಆರೋಪ ಸಂಬಂಧ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ಕೆಪಿಸಿಸಿ ಕಾರ್ಯದರ್ಶಿ ಭೀಮನಗೌಡ ಜಿ ಪರಗೊಂಡ ದೂರು ಸಲ್ಲಿಸಿದ್ದಾರೆ.

complaint-field-in-lokayukta-to-get-statement-of-mla-yatnal-about-covid-scam-allegation
ಕೋವಿಡ್ ಅವಧಿಯಲ್ಲಿ ಅಕ್ರಮದ ಆರೋಪ; ಶಾಸಕ‌ ಯತ್ನಾಳ್ ಹೇಳಿಕೆ ಪಡೆಯುವಂತೆ ಲೋಕಾಯುಕ್ತಕ್ಕೆ ದೂರು

By ETV Bharat Karnataka Team

Published : Dec 30, 2023, 5:57 PM IST

ಬೆಂಗಳೂರು: ಕೋವಿಡ್​ ಅವಧಿಯಲ್ಲಿ 40 ಸಾವಿರ ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಆರೋಪ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರಿಂದ ದಾಖಲೆಗಳು, ಹೇಳಿಕೆ ಪಡೆದು ಸಮಗ್ರ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಲೋಕಾಯುಕ್ತಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಯ ಕಾರ್ಯದರ್ಶಿ ಭೀಮನಗೌಡ ಜಿ ಪರಗೊಂಡ ದೂರು ನೀಡಿದ್ದಾರೆ.

ಡಿಸೆಂಬರ್ 26ರಂದು ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ''ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 45 ರೂ ಇರುವ ಮಾಸ್ಕ್​ಅನ್ನು 485 ರೂಪಾಯಿಗೆ ಖರೀದಿ ಮಾಡಲಾಗಿದೆ. ಒಟ್ಟಾರೆಯಾಗಿ ಆ ಅವಧಿಯಲ್ಲಿ 40 ಸಾವಿರ ಕೋಟಿ ಸರ್ಕಾರಿ ಹಣ ದುರುಪಯೋಗ ಆಗಿದೆ" ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಸದರಿ ಶಾಸಕರ ಬಳಿ ಲಭ್ಯವಿರುವ ದಾಖಲೆಗಳನ್ನು ಪಡೆದುಕೊಂಡು, ಶಾಸಕರ ಹೇಳಿಕೆ ಪಡೆಯಬೇಕು ಮತ್ತು ಕೋವಿಡ್ ಅವಧಿಯಲ್ಲಿ ಮಾಸ್ಕ್ ಮತ್ತಿತರ ವೈದ್ಯಕೀಯ ಉಪಕರಣಗಳ ಖರೀದಿ ಪ್ರಕ್ರಿಯೆಯ ಬಗ್ಗೆ ತನಿಖೆ ಮಾಡಬೇಕು. ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಯತ್ನಾಳ್​ರ ₹40 ಸಾವಿರ ಕೋಟಿ ಕೋವಿಡ್ ಅಕ್ರಮ ಆರೋಪ ನಂಬಲು ಅಸಾಧ್ಯ, ತನಿಖೆ ನಡೆಸಿ: ಹೆಚ್​ಡಿಕೆ

ABOUT THE AUTHOR

...view details