ಬೆಂಗಳೂರು:ರಾಜ್ಯ ಸರ್ಕಾರ ನೇಮಿಸಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯ ನಂತರ ಮಾತನಾಡಿದ ಪಾಟೀಲರು, ಈಗಲ್ಟನ್ ರೆಸಾರ್ಟ್ ವಿರುದ್ಧ ಸಾಕಷ್ಟು ದೂರುಗಳು ಬಂದಿದ್ದವು. ಒಟ್ಟು 980 ಕೋಟಿಯಷ್ಡು ದೊಡ್ಡ ಮೊತ್ತದ ಹಣ ಬಾಕಿ ಪಾವತಿಯಾಗಬೇಕಿದೆ. ಆದರೆ ಸುಪ್ರೀಂಕೋರ್ಟ್ ಆದೇಶವಿದ್ದಾಗಲೂ ಹಣ ಪಾವತಿ ಮಾಡ್ತಿಲ್ಲ. ಈ ಹಿನ್ನೆಲೆಯಲ್ಲಿ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದರು.
ಸರ್ಕಾರ ಕೂಡ ಅವರಿಗೆ ಪೂರಕವಾಗಿದೆ ಎಂಬ ಅನುಮಾನ ಮೂಡಿಸುವಂತೆ ನಡೆದುಕೊಳ್ಳಲಾಗುತ್ತಿದೆ. ಈ ಅನುಮಾನ ಬಗೆಹರಿಸಬೇಕು. ಸರ್ಕಾರಿ ಜಾಗವನ್ನೂ ವಾಪಸ್ ಪಡೆದುಕೊಳ್ಳಬೇಕಿದೆ. ಸುಪ್ರೀಂಕೋರ್ಟ್ಗಿಂತ ಯಾರೂ ದೊಡ್ಡವರಿಲ್ಲ ಎಂದರು.
ಇದಾದ ಬಳಿಕ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಈಗಲ್ಟನ್ ರೇಸಾರ್ಟ್ಗೆ ಖಾಸಗಿ ಬಸ್ನಲ್ಲಿ ತೆರಳಿದರು. ಎಚ್.ಕೆ ಪಾಟೀಲ್, ಎ.ಟಿ. ರಾಮಸ್ವಾಮಿ, ಮುರುಗೇಶ್ ನಿರಾಣಿ, ರಮೇಶ್ ಕುಮಾರ್, ಬೋಪಯ್ಯ, ಸರವಣ ಸೇರಿದಂತೆ ಹಲವು ಶಾಸಕರು ಪಯಣ ಬೆಳೆಸಿದ್ದರು.