ಕರ್ನಾಟಕ

karnataka

ETV Bharat / state

ಕ್ಲಸ್ಟರ್‌ಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಶ್ರಮವಹಿಸಿ: ಸಚಿವ ಜಗದೀಶ್‌ ಶೆಟ್ಟರ್‌

ಉದ್ಯೋಗ ಸೃಷ್ಟಿಸುವ ಪ್ರಮುಖ ಯೋಜನೆಯಾಗಿರುವ ಕಾಂಪೀಟ್‌ ವಿತ್‌ ಚೈನಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಜಗದೀಶ್ ಶಟ್ಟರ್​ ನಡೆಸಿದರು.

ಜಗದೀಶ್‌ ಶೆಟ್ಟರ್‌

By

Published : Oct 16, 2019, 9:18 PM IST

ಬೆಂಗಳೂರು:ಜಿಲ್ಲೆಗಳ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಪ್ರಮುಖ ಯೋಜನೆಯಾಗಿರುವ ಕಾಂಪೀಟ್‌ ವಿತ್‌ ಚೈನಾ ಯೋಜನೆಯಡಿ ಗುರುತಿಸಲಾದ ಜಿಲ್ಲೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಶ್ರಮವಹಿಸಿ ಎಂದು, ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಯೋಜನೆಯ ಬಗ್ಗೆ ವಿಸ್ತೃತ ಮಾಹಿತಿ ಪಡೆದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಅಗತ್ಯವಾಗಿರುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಅಲ್ಲದೇ, ಈ ಕ್ಲಸ್ಟರ್‌ ಆಧಾರಿತ ಯೋಜನೆಯಲ್ಲಿ ಬಂಡವಾಳ ಹೆಚ್ಚಾಗಿ ಹರಿದು ಬರುವಂತೆ ಮಾಡುವುದರಿಂದ ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಅಭಿವೃದ್ದಿಗೆ ಬಲ ನೀಡಿದಂತಾಗುತ್ತದೆ. ಈ ಕ್ಲಸ್ಟರ್‌ ಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ಹೂಡಿಕೆಗೆ ಇರುವ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕೆಗಳಿಗೆ ಬೇಕಾಗಿರುವ ಅಗತ್ಯ ಭೂಮಿ ಹಾಗೂ ಇನ್ನಿತರ ಅನುಮತಿಗಳನ್ನು ತ್ವರಿತವಾಗಿ ನೀಡಲು ಅನುಕೂಲ ವಾಗುವಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಒಂದು ಸಭೆ ಆಯೋಜಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್‌ ಕೃಷ್ಣಾ ಹಾಗೂ ಕ್ಲಸ್ಟರ್‌ಗಳ ನೋಡಲ್‌ ಅಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details