ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಸದ್ಯ ಎಲ್ಲಾ ವಿಷಯ ಕೋರ್ಟ್ ಮುಂದೆ ಹೋಗಲಿದೆ. ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ಪ್ರತಿದಿನ ಕೋರ್ಟ್ಗೆ ಎಲ್ಲಾ ವರದಿ ನೀಡುತ್ತಿದ್ದೇವೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ರಾಜಕೀಯ ಒತ್ತಡವಿಲ್ಲ, ಇದ್ದರೂ ನಾವು ತಲೆಕೆಡಿಸಿಕೊಳ್ಳಲ್ಲ: ಕಮಲ್ ಪಂತ್ - City police commissioner
ಈಗಾಗಲೇ ಎಷ್ಟು ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಪ್ರಕರಣ ಸದ್ಯ ಸರಿ ದಾರಿಯಲ್ಲಿ ಹೋಗುತ್ತಿದೆ. ನಟಿಮಣಿಯವರನ್ನು ಯಾವ ಕಾರಣಕ್ಕೆ ಬಂಧಿಸಿದ್ದೇವೆಂದು ಹೇಳಲು ಆಗಲ್ಲ, ನಾವು ಕಾನೂನು ಪ್ರಕಾರವೇ ತನಿಖೆ ಮಾಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಡ್ರಗ್ ಲಿಂಕ್ ಆರೋಪ ಪ್ರಕರಣದಲ್ಲಿ ರಾಜಕೀಯ ಒತ್ತಡವಿಲ್ಲ, ಇದ್ದರೂ ನಾವು ತಲೆ ಕೆಡಿಸಿಕೊಳ್ಳಲ್ಲ: ಕಮಲ್ ಪಂತ್
ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸರಿ, ಯಾವುದೇ ಮುಲಾಜ್ ಇಲ್ಲ. ಪ್ರಕರಣದಲ್ಲಿ ಎಷ್ಟು ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಪ್ರಕರಣ ಸದ್ಯ ಸರಿ ದಾರಿಯಲ್ಲಿ ಹೋಗುತ್ತಿದೆ. ನಟಿಮಣಿಯವರನ್ನು ಯಾವ ಕಾರಣಕ್ಕೆ ಬಂಧಿಸಿದ್ದೇವೆ ಎಂಬುದನ್ನು ಸಹ ಹೇಳಲು ಆಗಲ್ಲ. ನಾವು ಕಾನೂನು ಪ್ರಕಾರವೇ ತನಿಖೆ ಮಾಡುತ್ತಿದ್ದೇವೆ ಎಂದರು.
ಈ ಪ್ರಕರಣ ರಾಷ್ಟ್ರೀಯ ಮಟ್ಟಕ್ಕೆ ಹೋದರೂ ನಾವು ಪ್ರಕರಣ ತನಿಖೆ ಮಾಡಲಿದ್ದೇವೆ. ಹಾಗೆ ಯಾವುದೇ ರಾಜಕೀಯ ಒತ್ತಡವಿಲ್ಲ. ಇದ್ದರೂ ನಾವು ಅದಕ್ಕೆ ತಲೆಕೆಡೆಡಿಸಿಕೊಳ್ಳಲ್ಲ ಎಂದಿದ್ದಾರೆ.