ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಕಣ್ಣು ಹಾಯಿಸಿದಷ್ಟು ಹಳದಿ, ಬಿಳಿ, ತಿಳಿಕೆಂಪು ಹೂವುಗಳದ್ದೇ ದರ್ಬಾರ್. ಈ ಕಲರ್ ಕಲರ್ ಹೂವುಗಳನ್ನ ನೋಡುತ್ತಿದ್ದರೆ ವ್ಹಾವ್ ಅಂತ ಅನ್ನಿಸದೇ ಇರದು.
ಮರದ ತುಂಬಾ ಹಬ್ಬಿರೋ ಈ ಹೂಗಳ ಅಂದವನ್ನು ನೋಡುತ್ತಿದ್ದರೆ ಯಾರಿಗಾದ್ರೂ ಸ್ವಲ್ಪ ಹೊತ್ತು ಇಲ್ಲಿಯೇ ಇದ್ದು ಬಿಡೋಣ ಅನ್ನಿಸುತ್ತದೆ. ಕೆಂಪು, ಬಿಳಿ, ನೀಲಿ, ಕೇಸರಿ ಬಣ್ಣದಲ್ಲಿ ಅರಳಿ ನಿಂತಿರೋ ಬಣ್ಣ ಬಣ್ಣದ ಹೂವುಗಳಂತು ಒಂದಕ್ಕಿಂತ ಒಂದು ಆಕರ್ಷಣೀಯವಾಗಿ ಕಂಗೊಳಿಸುತ್ತಿವೆ. ಉದ್ಯಾನನಗರಿಯ ಕಬ್ಬನ್ ಪಾರ್ಕ್, ಲಾಲ್ಬಾಗ್ ಇದೀಗ ಎಲ್ಲರ ಆಕರ್ಷಣೀಯ ಸ್ಥಳವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕಲರ್ ಕಲರ್ ಹೂವುಗಳ ಕಂಪು ಸಾಮಾನ್ಯವಾಗಿ ಕಾಲಕ್ಕನುಗುಣವಾಗಿ ಅರಳುವ ಹೂಗಳು ಮರದ ತುಂಬೆಲ್ಲಾ ಹಬ್ಬಿರೋದನ್ನ ನೋಡಿದರೆ ಆಕಾಶಕ್ಕೆ ಶೃಂಗಾರ ಮಾಡಿದಂತೆ ಭಾಸವಾಗುತ್ತೆ. ಅದರಲ್ಲೂ ಈ ಸಮಯದಲ್ಲಿ ಮರದ ತುಂಬಾ ಗೊಂಚಲು ಗೊಂಚಲಾಗಿ ಕಾಣಸಿಗುವ ಟ್ಯಾಬುಬಿಯಾ ಮತ್ತು ಪ್ಲಮೇರಿಯಾ (plumeria), ಗುಲ್ಮೊಹರ್ ಸೇರಿದಂತೆ ಹಲವು ಬೇಸಿಗೆಯ ಹೂವುಗಳು ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಇವುಗಳು ನೋಡುಗರ ಕಣ್ಮನ ಸೆಳೆಯುವ ಜೊತೆಗೆ ಆಹ್ಲಾದಕರ ವಾತಾವರಣವನ್ನು ಸೃಷ್ಠಿಮಾಡಿವೆ. ಬರೋ ಪ್ರವಾಸಿಗರನ್ನು ಆಕರ್ಷಿಸಲು ಪ್ರಕೃತಿಯೇ ಮೈದುಂಬಿದ್ದು ಹೂವುಗಳ ಮೂಲಕ ಸ್ವಾಗತಿಸುತ್ತಿವೆ. ಇನ್ನು ಪ್ರತಿನಿತ್ಯ ಮುಂಜಾನೆ ವಾಯುವಿಹಾರಕ್ಕೆ ಆಗಮಿಸೋ ಸಿಲಿಕಾನ್ ಸಿಟಿ ಮಂದಿಗೆ ಅರಳಿರೋ ಹೂಗಳು ಇನ್ನಷ್ಟು ಹುಮ್ಮಸ್ಸು ನೀಡುವ ಮೂಲಕ ಪಾಸಿಟಿವ್ ಎನರ್ಜಿ ನೀಡುತ್ತಿರೋದಂತು ಸತ್ಯ.