ಕರ್ನಾಟಕ

karnataka

By

Published : Jun 21, 2019, 2:12 AM IST

ETV Bharat / state

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ಕೊಠಡಿಗಳು ಸಿಎಂರಿಂದ ಉದ್ಘಾಟನೆ

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದರು.

ಬೆಂಗಳೂರು

ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ ಮಾಡುವ ಮೂಲಕ ಜನರ ಸೇವೆಗೆ ಅರ್ಪಿಸಿದರು.

ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಇನ್ಫೋಸಿಸ್ ವತಿಯಿಂದ ಐದು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಮಾಡಲಾಗಿದ್ದು, ರೋಗಿಗಳಿಗೆ ಸುಧಾಮೂರ್ತಿ ಅನುಕೂಲ ಮಾಡಿ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ಜಯದೇವ, ಇಂದಿರಾಗಾಂಧಿ, ಸಂಜಯ್ ಗಾಂಧಿ ಆಸ್ಪತ್ರೆಗಳು ಉತ್ತಮ ರೀತಿ ಕೆಲಸ ಮಾಡುತ್ತಿವೆ. ಹಾಗೆ ನಮ್ಮ ಮೈತ್ರಿ ಸರ್ಕಾರ ಕೂಡ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೆಲಸ ಮಾಡುತ್ತಿದೆ ಎಂದರು.

ಮೇಧಿನಿ ಎಂಬ ಗ್ರಾಮದ ರಸ್ತೆ ಅರಣ್ಯ ಇಲಾಖೆ ಪರಿಮಿತಿಯಲ್ಲಿ ಬರುತ್ತದೆ. ದೇಶದಲ್ಲಿ ಈ ರೀತಿಯ ರಸ್ತೆ ಸಮಸ್ಯೆಗಳಿವೆ. ಸುಧಾಮೂರ್ತಿ ಅವರು ಕಾರವಾರದ ರಸ್ತೆ ಸಮಸ್ಯೆ ಸರಿಪಡಿಸಲು‌ ಮುಂದಾಗಿದ್ದು, ನಾನು ಈಗಾಗಲೇ ಜಿಲ್ಲಾಧಿಕಾರಿ ಜೊತೆ ಫೋನ್​ನಲ್ಲಿ ಮಾತಾಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿ ವರದಿ ನೀಡಲಿದ್ದಾರೆ. ಈ ಸಂಸ್ಥೆ ವರ್ಷಕ್ಕೆ ಸುಮಾರು 400 ಕೋಟಿಯಷ್ಟು ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇನ್ಫೋಸಿಸ್‌ ಸಂಸ್ಥೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂತಹ ಸೇವೆಗೆ ನಮ್ಮ ಸರ್ಕಾರವೂ ಸಹಕಾರ ನೀಡಲಿದೆ ಎಂದರು.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನೂತನ ಶಸ್ತ್ರಚಿಲಿತ್ಸಾ ಕೊಠಡಿಗಳ ಉದ್ಘಾಟಿಸಿದ ಸಿಎಂ ಕುಮಾರಸ್ವಾಮಿ

ಕಿದ್ವಾಯಿಯಲ್ಲಿ ಈಗಾಗಲೇ 8 ಓಟಿಪಿ ಗಳಿದ್ದವು. ಈಗ 5 ಹೆಚ್ಚಿನ ಓಟಿಪಿಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ. ಹೀಗಾಗಿ ಇನ್ಮುಂದೆ ಯಾವ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ. ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಧಾ ಮೂರ್ತಿ ಅವರು ಆಸ್ಪತ್ರಗೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ ರಾಮಚಂದ್ರ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ವೈದ್ಯಕೀಯ ಸಚಿವ ಇ .ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಇನ್ಪೋಸಿಸ್​​ ಸುಧಾ ಮೂರ್ತಿ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಸಿ. ರಾಮಚಂದ್ರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಜಯದೇವ ನಿರ್ದೇಶಕ ಮಂಜುನಾಥ್​ ಭಾಗಿಯಾಗಿದ್ರು.

For All Latest Updates

TAGGED:

ABOUT THE AUTHOR

...view details