ಕರ್ನಾಟಕ

karnataka

ETV Bharat / state

ಶಾಸಕರ ಸಭೆ ನಡೆಸುತ್ತಿಲ್ಲ: ಟ್ವೀಟ್​ ಮೂಲಕ ಸಿಎಂ ಬಿಎಸ್​ವೈ ಸ್ಪಷ್ಟನೆ - ಸಿಎಂ ಯಡಿಯೂರಪ್ಪ

ಇಂದು ಗೃಹ ಕಚೇರಿ ಕೃಷ್ಣದಲ್ಲಿ ಅತೃಪ್ತ ಶಾಸಕರ ಜೊತೆಗೆ ಸಿಎಂ ಸಭೆ ನಡೆಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್​ ಮೂಲಕ ಸಿಎಂ ಸ್ಪಷ್ಟನೆ.
ಟ್ವೀಟ್​ ಮೂಲಕ ಟ್ವೀಟ್​ ಮೂಲಕ ಸಿಎಂ ಸ್ಪಷ್ಟನೆ. ಸಿಎಂ ಸ್ಪಷ್ಟನೆ.

By

Published : May 29, 2020, 10:43 AM IST

ಬೆಂಗಳೂರು: ಪಕ್ಷದ ಕೆಲ ಶಾಸಕರ ಸಭೆ ಕರೆದಿಲ್ಲ. ಯಾವುದೇ ಶಾಸಕರ ಜೊತೆ ಸಭೆ ನಡೆಸುತ್ತಿಲ್ಲ ಎಂದು ಟ್ವೀಟ್​ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ .

ಟ್ವೀಟ್​ ಮೂಲಕ ಸಿಎಂ ಸ್ಪಷ್ಟನೆ

ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details