ಕರ್ನಾಟಕ

karnataka

By

Published : Jan 19, 2020, 9:59 AM IST

ETV Bharat / state

ಕೋಟ್ ಸೂಟ್ ಹಾಕಿ ಹೊಸ ಲುಕ್ಕು... ಟಿಪ್​ಟಾಪ್​ ಆಗಿ ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ಸ್ವಿಟ್ಜರ್ಲೆಂಡ್‌ನ ದಾವೋಸ್​ಗೆ ಪ್ರಯಾಣ ಬೆಳೆಸಿದೆ. ದಾವೋಸ್​ ಪ್ರವಾಸ ಹಿನ್ನೆಲೆ ಸಿಎಂ ವೇಷ ಭೂಷಣಗಳೆಲ್ಲ ಬದಲಾಗಿದ್ದು, ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್​ನಲ್ಲಿ ಬಿಎಸ್​ವೈ ಮಿಂಚುತ್ತಿದ್ದಾರೆ.

CM Tour Switzerland Davos
ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ಬೆಂಗಳೂರು:ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯಡಿಯೂರಪ್ಪ, ಸಚಿವ ಜಗದೀಶ್ ಶೆಟ್ಟರ್ ಮತ್ತು ಅಧಿಕಾರಿಗಳ ತಂಡ ಸ್ವಿಟ್ಜರ್ಲೆಂಡ್‌ನ ದಾವೋಸ್​ಗೆ ಪ್ರಯಾಣ ಬೆಳೆಸಿದೆ. ದಾವೋಸ್​ ಪ್ರವಾಸ ಹಿನ್ನೆಲೆ ಸಿಎಂ ವೇಷ ಭೂಷಣಗಳೆಲ್ಲ ಬದಲಾಗಿದ್ದು, ನೇವಿ ಗ್ರೇ ಬಣ್ಣದ ಕೋಟ್, ವೈಟ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿ ಹೊಸ ಲುಕ್​ನಲ್ಲಿ ಬಿಎಸ್​ವೈ ಮಿಂಚುತ್ತಿದ್ದಾರೆ.

ವಿದೇಶಕ್ಕೆ ತೆರಳಿದ ಸಿಎಂ ಬಿಎಸ್​ವೈ

ಇನ್ನು‌ ದಾವೋಸ್​ನಲ್ಲಿ ಮೈನಸ್ 10 ಡಿಗ್ರಿಯಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಿನ್ನೆಲೆ, ಚಳಿಯಿಂದ ಬೆಚ್ಚಗಿರಲು ‌ಸಿಎಂಗೆ, ಪುತ್ರ ವಿಜಯೇಂದ್ರ ಮತ್ತು ಪುತ್ರಿ ಉಮಾ ಇಬ್ಬರು ಈಗಾಗಲೇ ಸ್ವೆಟರ್ ಮತ್ತು ಕೋಟ್ ಖರೀದಿಸಿ ಕೊಟ್ಟಿದ್ದಾರೆ. ಇನ್ನು ಸಿಎಂ ವಿದೇಶ ಪ್ರವಾಸ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಆಗಮಿಸಿದ ಸಚಿವ ಪ್ರಭು ಚೌಹಾಣ್, ಬಾಬುರಾವ್ ಚಿಂಚನಸೂರ್, ಕಿರಿಯ ಮಗ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು. ಧವಳಗಿರಿ ನಿವಾಸದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊರಟ ಸಿಎಂ 10.25ಕ್ಕೆ ದುಬೈಗೆ ಪ್ರಯಾಣ ಬೆಳೆಸಲಿದ್ದು, ದುಬೈನಿಂದ ಜೂರಿಚ್​ಗೆ ತಲುಪಿ, ಅಲ್ಲಿಂದ ದಾವೂಸ್​ ತೆರಳಲಿದ್ದಾರೆ.

ದಾವೋಸ್​ಗೆ ತೆರಳುವ ಮುನ್ನ ಸಿಎಂ ಯಡಿಯೂರಪ್ಪ ಮಾತನಾಡಿ, ನಾಲ್ಕು ದಿನಗಳ ಶೃಂಗಸಭೆಗಾಗಿ ದಾವೋಸ್ ಕಡೆ ಪ್ರಯಾಣ ಮಾಡ್ತಿದ್ದೇನೆ. ರಾಜ್ಯಕ್ಕೆ ಹೂಡಿಕೆ ತರಲು ವಿಶೇಷ ಪ್ರಯತ್ನ ಮಾಡುತ್ತೇನೆ. 38 ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಲಿದ್ದೇನೆ. ವಿಶ್ವ ಆರ್ಥಿಕ ಫೋರಮ್​ನಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರಿಗೆ ನಾವು ಸೌಲಭ್ಯ, ಸಹಕಾರ ಕೊಡ್ತೇವೆ. ಈ ಎಲ್ಲಾ ಪ್ರಯತ್ನಗಳಿಂದ ಉದ್ಯೋಗವಕಾಶ ಹೆಚ್ಚಾಗುತ್ತದೆ. ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಇದ್ರೂ ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ, ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡ್ತೇವೆ ಎಂದರು.

ಇನ್ನು ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಂಪುಟ ವಿಸ್ತರಣೆ ಕುರಿತು ಅರ್ಧ ಗಂಟೆಗಳ ಕಾಲ ಅಮಿತ್​ ಷಾ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇನೆ. ಅಮಿತ್ ಷಾರಿಂದ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ, ನಾನು ದಾವೋಸ್​ನಿಂದ ಬರ್ತಿದ್ದಂತೆ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೇನೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ತಿಳಿಸಿದರು.

ABOUT THE AUTHOR

...view details