ಬೆಂಗಳೂರು: ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಶಾಸಕರ ಭವನದ ಬಳಿಯ ಕನಕದಾಸರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ, ಕನಕದಾಸರು ಕನ್ನಡ ಸಾರಸ್ವತ ಲೋಕದ ಹಾಗೂ ಕೀರ್ತನಾ ಸಾಹಿತ್ಯದ ಅದ್ಭುತ ಪ್ರತಿಭೆ. ಕಾವ್ಯದಲ್ಲಿ ಮಾನವೀಯತೆ ಹಾಗೂ ಸಮಸಮಾಜದ ಕಾಳಜಿಯನ್ನು ಸರಳವಾಗಿ ಜನರಿಗೆ ಹೇಳುತ್ತಿದ್ದ ದಾರ್ಶನಿಕರು ಎಂದು ಸ್ಮರಿಸಿದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ನಾಡಿನ ಸಮಸ್ತರಿಗೂ ಸಂತಕವಿ, ದಾಸಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯ ಕೋರಿದ್ದಾರೆ. 16ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದ ಕನಕದಾಸರಿಗೆ ನಮನಗಳು. ಅವರು ತೋರಿದ ಸಮಾನತೆಯ ದಾರಿಯಲ್ಲಿ ನಾವೆಲ್ಲರೂ ನಡೆಯುವುದು ಅವಶ್ಯಕ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.