ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಚರಿಸುತ್ತಿದ್ದ ಕಾರು ದಾರಿ ತಪ್ಪಿ, ಬಳಿಕ ಒನ್ ವೇ ನಲ್ಲೇ ವಾಪಸ್ ಬಂದ ಘಟನೆ ನಗರದಲ್ಲಿ ನಡೆದಿದೆ.
ದಾರಿ ತಪ್ಪಿ ಒನ್ ವೇ ನಲ್ಲೇ ವಾಪಸಾದ ಸಿಎಂ ಯಡಿಯೂರಪ್ಪ ಕಾರು!
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಚರಿಸುತ್ತಿದ್ದ ಕಾರು ಇಂದು ದಾರಿ ತಪ್ಪಿ, ನಂತರ ಒನ್ ವೇ ನಲ್ಲೇ ವಾಪಸ್ ಬಂದ ಘಟನೆ ನಡೆದಿದೆ. ಕಾರು ಗೃಹ ಕಚೇರಿ ಕೃಷ್ಣಾಗೆ ಬಾರದೆ ವಿಧಾನಸೌಧಕ್ಕೆ ಬಿಎಸ್ವೈ ಸೂಚನೆ ಮೇರೆಗೆ ಹೊರಟಿತ್ತು. ಬಳಿಕ ಎಚ್ಚೆತ್ತುಕೊಂಡು ಮತ್ತೆ ಕೃಷ್ಣಾ ಕಡೆ ಕಾರನ್ನು ತಿರುಗಿಸಿದಾಗ ಒನ್ ವೇ ನಲ್ಲೇ ಸಿಎಂ ವಾಪಸಾಗಿದ್ದಾರೆ.
ಗೃಹ ಕಚೇರಿ ಕೃಷ್ಣಾಗೆ ತೆರಳಲು ಡಾಲರ್ಸ್ ಕಾಲೋನಿಯ ನಿವಾಸದಿಂದ ಹೊರಟಿದ್ದ ಸಿಎಂ ಬಿಎಸ್ವೈ ಅವರ ಕಾರು ಗೃಹ ಕಚೇರಿ ಕೃಷ್ಣಾಗೆ ಬರದೆ ವಿಧಾನಸೌಧಕ್ಕೆ ತೆರಳಿತ್ತು. ಬಳಿಕ ಮಾರ್ಗ ಮಧ್ಯದಲ್ಲಿ ಎಚ್ಚೆತ್ತುಕೊಂಡ ಕಾರು ಚಾಲಕ ಮತ್ತೆ ಕೃಷ್ಣಾ ಕಡೆ ಕಾರನ್ನು ತಿರುಗಿಸಿದರು. ಲಿ ಮೆರಿಡಿಯನ್ ಹೋಟೆಲ್ವರೆಗೂ ಹೋಗಿದ್ದ ಕಾರನ್ನು ತಿರುಗಿಸಿಕೊಂಡು ಅದೇ ರಸ್ತೆಯಲ್ಲಿ ಬಂದಿದ್ದಾರೆ.
ಮನೆಯಿಂದ ಹೊರಡುವಾಗ ವಿಧಾನಸೌಧಕ್ಕೆ ಹೊರಡುವಂತೆ ಚಾಲಕನಿಗೆ ಸಿಎಂ ಸೂಚನೆ ನೀಡಿದ್ದು, ಅವರ ಸೂಚನೆಯಂತೆ ವಿಧಾನಸೌಧಕ್ಕೆ ಹೋಗಲಾಗುತ್ತಿತ್ತು. ಆದರೆ, ತಕ್ಷಣ ದಾರಿ ಮಧ್ಯದಲ್ಲಿ ಕೃಷ್ಣಾಗೆ ಹೋಗುವಂತೆ ಸಿಎಂ ಬಿಎಸ್ವೈ ಹೇಳಿದ್ದಾರೆ. ಇದರಿಂದಾಗಿ ಬಂದ ದಾರಿಯಲ್ಲೇ ವಾಹನ ತಿರುಗಿಸಿ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ವಾಪಸಾಗಿವೆ ಎಂದು ತಿಳಿದುಬಂದಿದೆ. ವಾಪಸ್ ಬರೋವಾಗ ಒನ್ ವೇ ನಲ್ಲೇ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ಬಂದಿವೆ.