ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಶ್ವಾನ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಶ್ವಾನಗಳ ಪೋಷಣೆಗಾಗಿ ವಿಶೇಷ ಕಾರ್ಯಕ್ರಮ ಘೋಷಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಅಧಿಕಾರಾವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ದುಡಿಯುವ ವರ್ಗಗಳಿಗೆ ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಸಿಎಂ ಬೊಮ್ಮಾಯಿ ಮಂಡಿಸಿರುವ ತಮ್ಮ ಎರಡನೇ ಬಜೆಟ್ನಲ್ಲಿ ಅದೊಂದು ವಿಶೇಷ ಕಾಳಜಿ ವಹಿಸಿದ್ದಾರೆ. ಬಜೆಟ್ನಲ್ಲೇ ಅದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ.
ಹೌದು, ಅಷ್ಟಕ್ಕೂ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ತಮ್ಮ ಪ್ರೀತಿಪಾತ್ರ ಪ್ರಾಣಿ ಶ್ವಾನ ಕುರಿತು ವಾತ್ಸಲ್ಯ ತೋರಿದ್ದಾರೆ. ಶ್ವಾನದ ಬಗ್ಗೆ ಸಿಎಂ ಬೊಮ್ಮಾಯಿಗಿರುವ ಅಕ್ಕರೆ ಗೊತ್ತೇ ಇದೆ. ತಮ್ಮ ಮನೆಯಲ್ಲೇ ಸಾಕು ಶ್ವಾನ ಸತ್ತಾಗ ಕಣ್ಣೀರು ಹಾಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಸಿಎಂ ಬೊಮ್ಮಾಯಿ ಎಷ್ಟರ ಮಟ್ಟಿಗೆ ಶ್ವಾನಪ್ರಿಯರು ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಾಗಿಯೇ ತಮ್ಮ ಬಜೆಟ್ನಲ್ಲಿ ಶ್ವಾನಕ್ಕಾಗಿ ವಿಶೇಷ ಯೋಜನೆ ರೂಪಿಸಿದ್ದಾರೆ.
ಬಜೆಟ್ನಲ್ಲಿ ಸಿಎಂ ಶ್ವಾನ ಪ್ರೀತಿ : ಸಿಎಂ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಶ್ವಾನದ ಪೋಷಣೆಗಾಗಿ ವಿಶೇಷ ಕಾರ್ಯಕ್ರಮ ಘೋಷಿಸಿದ್ದಾರೆ. ಬೀದಿನಾಯಿಗಳ ಆರೈಕೆ ಮತ್ತು ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಒಂದು ಆನ್-ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ.
ಆ ಮೂಲಕ ಆಸಕ್ತ ಶ್ವಾನ ಪ್ರೇಮಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ದತ್ತು ಪಡೆಯಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಿದ್ದಾರೆ. ಬೀದಿ ನಾಯಿಗಳನ್ನು ದತ್ತು ಪಡೆಯುವ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಆಸಕ್ತ ಶ್ವಾನ ಪ್ರೇಮಿಗಳು ತಮ್ಮ ಹೆಸರು ಈ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಆ ಮೂಲಕ ಶ್ವಾನಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ. ಬೀದಿ ನಾಯಿಗಳ ಕಷ್ಟ, ನರಕಯಾತನೆ ಮನಗಂಡು ಶ್ವಾನಪ್ರಿಯ ಸಿಎಂ ಬಸವರಾಜ ಬೊಮ್ಮಾಯಿ ಈ ವಿಶೇಷ ಯೋಜನೆ ಘೋಷಿಸಿದ್ದಾರೆ.