ಬೆಂಗಳೂರು:ದೇಶದ ಮಾಧ್ಯಮ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತಂದಿರುವ ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರ ನೇತೃತ್ವದಲ್ಲಿ 'ಈಟಿವಿ ಭಾರತ' ಡಿಜಿಟಲ್ ಮಾಧ್ಯಮ ಇಡೀ ದೇಶದ ಎಲ್ಲ ಭಾಷೆಗಳಲ್ಲೂ ಬಂದಿರುವುದು ಸಂತಸದ ವಿಚಾರವಾಗಿದೆ. 'ಈಟಿವಿ ಭಾರತ'ಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ
'ಈಟಿವಿ ಭಾರತ' ಡಿಜಿಟಲ್ ಮಾಧ್ಯಮ ಇಡೀ ದೇಶದ ಎಲ್ಲಾ ಭಾಷೆಗಳಲ್ಲೂ ಬಂದಿರುವುದು ಸಂತಸದ ವಿಚಾರವಾಗಿದ್ದು, 'ಈಟಿವಿ ಭಾರತ' ಮಾಧ್ಯಮಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಭ ಕೋರಿದರು.
'ಈಟಿವಿ ಭಾರತ' ಬೆಂಗಳೂರು ಕಚೇರಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಡಿಜಿಟಲ್ ಮಾಧ್ಯಮವಾಗಿರುವ 'ಈಟಿವಿ ಭಾರತ' ಭವಿಷ್ಯದ ಮಾಧ್ಯಮವಾಗಿದೆ. ಈ ರೀತಿಯ ಡಿಜಿಟಲ್ ಮೀಡಿಯಾ ಸುಲಭವಾಗಿ ಜನಸಾಮಾನ್ಯರಿಗೆ ಮೊಬೈಲ್ನಲ್ಲಿ ಸಿಗಲಿದೆ. ಬಹುಭಾಷೆಗಳಲ್ಲಿ ಈ ಮಾಧ್ಯಮ ಸಿಗುತ್ತಿರುವುದು ಒಳ್ಳೆಯ ವಿಚಾರವಾಗಿದ್ದು, ಈಟಿವಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ರಾಮೋಜಿ ರಾವ್ ಅವರು ಇಡೀ ದೇಶದ ಮಾಧ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುವ 'ಈಟಿವಿ ಭಾರತ' ಇಡೀ ಭಾರತದ ಎಲ್ಲ ಭಾಷೆಗಳಲ್ಲಿ ಬರುತ್ತಿರುವುದು ಎಲ್ಲರಿಗೂ ಸಂತೋಷದ ವಿಚಾರವಾಗಿದೆ. ಕರ್ನಾಟಕದಲ್ಲೂ ಬಹಳ ದೊಡ್ಡ ಪ್ರೆಸೆನ್ಸ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ 'ಈಟಿವಿ ಭಾರತ' ಬಹಳ ದೊಡ್ಡ ಯಶಸ್ಸು ಕಾಣಲಿದೆ. ಇದಕ್ಕೆ ಒಳ್ಳೆಯ ಭವಿಷ್ಯವಿದೆ, ಆಲ್ ದಿ ಬೆಸ್ಟ್ ಎಂದು ಸಿಎಂ ಶುಭ ಕೋರಿದರು.