ಕರ್ನಾಟಕ

karnataka

ETV Bharat / state

ಮಕ್ಕಳಿಗೆ ಲಸಿಕೆ, ವೃದ್ಧರಿಗೆ ಬೂಸ್ಟರ್ ಡೋಸ್: ಮೋದಿ ನಿರ್ಧಾರ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಮಕ್ಕಳಿಗೆ ಲಸಿಕೆ, ವೃದ್ಧರಿಗೆ ಹೆಚ್ಚುವರಿ ಡೋಸ್ ನೀಡುವ ಮೋದಿ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.

booster dose, precaution doses, CM Basavaraj Bommai said thanks, CM Basavaraj Bommai said thanks to modi, ಬೂಸ್ಟರ್​ ಡೋಸ್​, ಹೆಚ್ಚುವರಿ ಡೋಸ್​, ಸಿಎಂ ಬಸವರಾಜ ಬೊಮ್ಮಯಿ ಧನ್ಯವಾದ, ಪಿಎಂ ಮೋದಿಗೆ ಧನ್ಯವಾದ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ,
ಮೋದಿ ನಿರ್ಧಾರ ಸ್ವಾಗತಿಸಿದ ಸಿಎಂ ಬೊಮ್ಮಾಯಿ

By

Published : Dec 26, 2021, 2:18 AM IST

ಬೆಂಗಳೂರು:ಮಕ್ಕಳಿಗೆ ಕೋವಿಡ್ ಲಸಿಕೆ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸೇಜ್ ನೀಡುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರ ಕೋವಿಡ್ ವಿರುದ್ಧದ ಹೋರಾಟವನ್ನು ಸ್ವಾಗತಿಸುತ್ತೇನೆ. ಅವರ ದೂರದೃಷ್ಟಿ, ಪ್ರಯತ್ನ ಹಾಗೂ ನಿರ್ಣಯಗಳು ಕೋವಿಡ್ ವಿರುದ್ಧದ ಹೋರಾಟವನ್ನು ಯಶಸ್ವಿಗೊಳಿಸುತ್ತದೆ ಎಂಬ ಸಂಪೂರ್ಣವಾದ ನಂಬಿಕೆಯಿದೆ.

ಪ್ರಧಾನಿಯವರ ನಿರ್ಣಯ ಹಾಗೂ ಸಲಹೆಯನ್ನು ದೇಶ ಮತ್ತು ರಾಜ್ಯದ ಜನತೆ ಗಂಭೀರವಾಗಿ ಪರಿಗಣಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದೇ ಆದರೆ ಮಕ್ಕಳು, ಆರೋಗ್ಯ ಸೇವಾ ಕಾರ್ಯಕರ್ತರು, ವಯೋವೃದ್ಧರಿಗೆ ಬರುವಂತಹ ಕೋವಿಡ್ ಮಹಾಮಾರಿಯಿಂದ ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತದೆ. ಈ ನಿರ್ಧಾರ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details