ಕರ್ನಾಟಕ

karnataka

ETV Bharat / state

ಮಾತೆ ಮಹಾದೇವಿ ಲಿಂಗೈಕ್ಯ.. ಸಿಎಂ ಸೇರಿ ರಾಜಕೀಯ ಗಣ್ಯರ ಸಂತಾಪ - ಮಾತೆ ಮಹಾದೇವಿ

ಲಿಂಗಾಯತ ತತ್ವ ಪ್ರಚಾರದ ನಿಟ್ಟಿನಲ್ಲಿ ಅಸಂಖ್ಯಾತ ಕೃತಿಗಳನ್ನು ರಚಿಸಿದ ಮಾತೆ ಮಹಾದೇವಿ ಅವರು ಸಮಾಜವನ್ನು ಒಂದುಗೂಡಿಸುವುದರಲ್ಲಿ ನಿರತರಾಗಿದ್ದರು ಎಂದು ಸ್ಮರಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತ ವರ್ಗಕ್ಕೆ ಆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಣ್ಯರ ಸಂತಾಪ

By

Published : Mar 14, 2019, 10:03 PM IST

ಬೆಂಗಳೂರು: ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯರಾಗಿರುವುದಕ್ಕೆ ಸಿಎಂ‌ ಕುಮಾರಸ್ವಾಮಿ ಸಂತಾಪ ‌ಸೂಚಿಸಿದ್ದಾರೆ.

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಮಾತೆ ಮಹಾದೇವಿ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಲಿಂಗಾಯತ ತತ್ವ ಪ್ರಚಾರದ ನಿಟ್ಟಿನಲ್ಲಿ ಅಸಂಖ್ಯಾತ ಕೃತಿಗಳನ್ನು ರಚಿಸಿದ ಮಾತೆ ಮಹಾದೇವಿ ಅವರು ಸಮಾಜವನ್ನು ಒಂದುಗೂಡಿಸುವುದರಲ್ಲಿ ನಿರತರಾಗಿದ್ದರು ಎಂದು ಸ್ಮರಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತ ವರ್ಗಕ್ಕೆ ಆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾತೆ ಮಹಾದೇವಿ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ

ಕೈ ನಾಯಕರಿಂದ ಸಂತಾಪ:
ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍, ಕಾರ್ಯಾಧ್ಯಕ್ಷ ಈಶ್ವರ್‍ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್‍.ಕೆ. ಪಾಟೀಲ್, ಗೃಹ ಸಚಿವ ಎಂ.ಬಿ.ಪಾಟೀಲ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್‍ ಸದಸ್ಯ ಸಿ.ಎಂ.ಇಬ್ರಾಹಿಂ, ಮಾತೆ ಮಹದೇವಿಯವರ ನಿಧನ ಬಸವ ಪರಂಪರೆಗೆ ದೊಡ್ಡ ನಷ್ಟ. ಹೆಣ್ಣುಮಗಳಾಗಿ ಸಾಹಿತ್ಯದ ಜ್ಞಾನ ಅಪಾರವಾಗಿತ್ತು. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ದುಃಖ ಭರಿಸುವ ಶಕ್ತಿಯನ್ನು ಅವರ ಅನುಯಾಯಿಗಳಿಗೆ ದೇವರು ನೀಡಲಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಸಂತಾಪ ಸೂಚಿಸಿದ ಬಿಎಸ್​ವೈ:
ಬಸವ ಪೀಠಾಧ್ಯಕ್ಷೆ ಶರಣೆ ಮಾತೆ ಮಹಾದೇವಿ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಮಾತೆ ಮಹಾದೇವಿ ಇಂದು ಲಿಂಗೈಕ್ಯರಾಗಿರುವ ಸುದ್ದಿ ತಿಳಿದು ತೀವ್ರ ‌ಆಘಾತವಾಗಿದೆ. ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಶರಣೆ ‌ಮಾತೆ ಮಹಾದೇವಿಯವರು ಶರಣ ಧರ್ಮ ಪ್ರಚಾರ ಮಾಡುವಲ್ಲಿ ‌ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರು ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದರು.

ಶರಣೆ ಮಾತೆ ಮಹಾದೇವಿಯವರ ಲಿಂಗೈಕ್ಯದಿಂದಾಗಿ ಶರಣರಿಗೆ ಮತ್ತು ಭಕ್ತ ಸಮೂಹಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌ ಎಂದು ಸಂತಾಪ ಸಂದೇಶದ ಮೂಲಕ ಕೋರಿದ್ದಾರೆ.

ABOUT THE AUTHOR

...view details