ಬೆಂಗಳೂರು :ಪರಿಸರ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಆವರಣದಲ್ಲಿ ಇಂದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿ ನೆಟ್ಟು, ರೈತರು ಈ ಗಿಡವನ್ನು ಹೆಚ್ಚಾಗಿ ಬೆಳೆಯುವಂತೆ ಮನವಿ ಮಾಡಿದ್ದಾರೆ.
ಕ್ಯಾನ್ಸರ್ ನಿರೋಧಕ ಗಿಡ ನೆಡಿ: ರೈತರಿಗೆ ಸಿಎಂ ಸಲಹೆ
ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ. ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು ಎಂದು ಸಲಹೆ ಕೊಟ್ಟರು.
ಪರಿಸರ ದಿನಾಚರಣೆ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಪರಿಸರ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ನಿರೋಧಕ ಗಿಡ ನೆಟ್ಟು ಮಾತನಾಡಿದ ಸಿಎಂ, ಈ ಗಿಡ ಕ್ಯಾನ್ಸರ್ ನಿರೋಧಕ ಶಕ್ತಿ ಹೊಂದಿದೆ. ಇದರ ತೊಗಟೆ ಮತ್ತು ಬೀಜದಲ್ಲಿ ಔಷಧೀಯ ಗುಣಗಳಿವೆ ಎಂದರು.
ಈ ಗಿಡ ಕೈಗಾರಿಕಾ ಉತ್ಪನ್ನಗಳಿಗೂ ಹೆಚ್ಚು ಬಳಕೆಯಾಗುತ್ತದೆ. ನಾಡಿನ ರೈತರು ಈ ಗಿಡವನ್ನು ನೆಡುವ ಮೂಲಕ ತಮ್ಮ ವಾಣಿಜ್ಯ ಬೆಳೆಗಳಂತೆ ಇದನ್ನು ಬಳಸಿಕೊಳ್ಳಬಹುದು. ಇಂತಹ ಹೊಸ ಕೃಷಿ ವಿಧಾನಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ರೈತರಿಗೆ ಸಲಹೆ ಮಾಡಿದರು.