ಕರ್ನಾಟಕ

karnataka

ETV Bharat / state

ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡಲು 'ಕ್ಲಿನಿಕ್ ಆನ್ ವೀಲ್ಸ್' ಮಹತ್ವದ ಹೆಜ್ಜೆಯಾಗಿದೆ: ಬಿ.ಎಲ್.ಸಂತೋಷ್

ಮನೆ ಮನೆಗೆ ಇಂದು ಅರೋಗ್ಯ ಸೇವೆ ಒದಗಿಸುವ ಕೆಲಸ ಆಗಬೇಕಿದೆ. ಮುಂದೆ ಬರುವ ದೊಡ್ಡ ದೊಡ್ಡ ಕಾಯಿಲೆಗಳನ್ನು ತಡೆಯಲು ಇದು ಸಾಧ್ಯವಾಗಿಸುತ್ತದೆ ಎಂದು ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ.

Inauguration of Clinic on Wheels service
ಕ್ಲಿನಿಕ್ ಆನ್ ವೀಲ್ಸ್ ಸೇವೆಯ ಉದ್ಘಾಟನಾ ಕಾರ್ಯಕ್ರಮ

By

Published : Apr 1, 2023, 9:55 PM IST

ಬೆಂಗಳೂರು: ಸಾರ್ವಜನಿಕ ಆರೋಗ್ಯಕ್ಕೆ ತಕ್ಕಂತಹ ಮಹತ್ವದ ಕೊಡುಗೆಯನ್ನು ನೀಡುವ ಕೆಲಸ ಲಘು ಉದ್ಯೋಗ ಭಾರತಿ ಐ.ಎಂ.ಎಸ್ ಫೌಂಡೇಶನ್ ಮಾಡಿದೆ. ಆರೋಗ್ಯ ಎಂಬುದು ಮನುಷ್ಯರಿಗೆ ಬಹು ದೊಡ್ಡ ಶಕ್ತಿ. ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಕ್ಲಿನಿಕ್ ಆನ್ ವೀಲ್ಸ್ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಶನಿವಾರ ನಗರದ ಪ್ಯಾಲೇಸ್ ಮೈದಾನದಲ್ಲಿ ಐ.ಎಂ.ಎಸ್ ಪ್ರತಿಷ್ಠಾನ ತನ್ನ ಸಿ.ಎಸ್.ಆರ್ ಕಾರ್ಯಚಟುವಟಿಕೆಯ ಅಂಗವಾಗಿ ಕರ್ನಾಟಕ ಲಘು ಉದ್ಯೋಗ ಭಾರತಿ ಸಹಯೋಗದಲ್ಲಿ ಕ್ಲಿನಿಕ್ ಆನ್ ವೀಲ್ಸ್ ಸೇವೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ಅವರು, ವಿಶೇಷವಾಗಿ ನೆಲಮಂಗಲ ತಾಲೂಕಿನಿಂದ ಈ ಉಪಕ್ರಮ ಪ್ರಾರಂಭವಾಗಲಿದೆ. ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ನೂರಾರು ದಾನಿಗಳ ಸಹಕಾರ ಸಹ ದಾನಿಗಳು ಸಹ ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದರು.

ಇನ್ನು ಹೆಚ್ಚು ಈ ತರಹದ ಕಾರ್ಯಕ್ರಮಗಳು ಸಾರ್ವಜನಕಾರಿಗೆ ಮುಖ್ಯವಾಗಿ ಬಡ ಗ್ರಾಮೀಣ ರೋಗಿಗಳಿಗೆ ಲಭ್ಯವಾಗಬೇಕು. ಕರ್ನಾಟಕ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದು, ಈ ವಿಚಾರದಲ್ಲೂ ಸಹ ವಿನೂತನ ಹೆಜ್ಜೆ ಇಟ್ಟಿದೆ. ಆರೋಗ್ಯ ಕರ್ನಾಟಕ ರೋಗ ಮುಕ್ತ ಕರ್ನಾಟಕ ಘೋಷವಾಕ್ಯದ ಅಡಿಯಲ್ಲಿ ಎಲ್ಲರು ಕೆಲಸಮಾಡಬೇಕಿದೆ ಎಂದು ಸಂತೋಷ್ ಅಭಿಪ್ರಾಯಪಟ್ಟರು.

ಮೊಬೈಲ್ ಬಸ್ ಜನಸೇವೆಗೆ ಕೊಟ್ಟಿರುವ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ ಬಿಟುಬಿ ಉದ್ಯಮದ ಸಂಸ್ಥೆಯಾಗಿದೆ. ಇವರು ನೆಲೆಮಂಗಲದ ಬಳಿ ಪ್ರಾಯೋಗಿಕವಾಗಿ 3 ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಗ್ರಾಮಗಳಲ್ಲಿಯೇ ಪ್ರತಿಯೊಂದು ಮನೆಯನ್ನು ಸರ್ವೆಕ್ಷೆಣೆ ಮಾಡಿ ವಿದ್ಯಾಭ್ಯಾಸ ಅರೋಗ್ಯ ಸೇರಿದಂತೆ ಅನೇಕ ಸಂಗತಿಗಳ ಕುರಿತು ಮಾಹಿತಿ ಸಂಗ್ರಹಿಸಿ. ಅವುಗಳನ್ನು ಆರೋಗ್ಯಯುಕ್ತ ಗ್ರಾಮಗಳನ್ನಾಗಿ ಮಾಡಲು ಮುಂದಾಗಿದೆ. ಯಾರು ರೋಗದಿಂದ ಬಳಲದಂತೆ ಬಸ್ ನಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದರು.

ಆರೋಗ್ಯದ ಕುರಿತ ಮಾಹಿತಿ, ಬ್ಲಡ್ ಚೆಕ್ ಅಪ್, ಇ.ಸಿ.ಜಿ ಮಾಡುವುದರ ಜೊತೆಗೆ ಎಲ್ಲ ಔಷಧಗಳು ಸಹ ಉಚಿತವಾಗಿ ಲಭ್ಯವಿದೆ. ಇದರ ನಂತರ ರಾಜ್ಯದ ಬೇರೆ ಬೇರೆ ಕಡೆ ಈ ಸೇವೆಯನ್ನು ವಿಸ್ತರಿಸುವ ಯೋಜನೆ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ ಸಂಸ್ಥೆಗೆ ಇದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಮನೆ ಮನೆಗೆ ಇಂದು ಅರೋಗ್ಯ ಸೇವೆ ಒದಗಿಸುವ ಕೆಲಸ ಆಗಬೇಕಿದೆ. ಮುಂದೆ ಬರುವ ದೊಡ್ಡ ದೊಡ್ಡ ಕಾಯಿಲೆಗಳನ್ನು ತಡೆಯಲು ಇದು ಸಾಧ್ಯವಾಗಿಸುತ್ತದೆ. ಅಲ್ಲೋಪತಿಯಲ್ಲಿ ಮೊದಲೇ ಚಿಕಿತ್ಸೆ ನೀಡಿದರೆ ಹಲವು ರೋಗಗಳನ್ನು ನಿಯಂತ್ರಿಸಬಹುದು ಎಂದು ಉಲ್ಲೇಖಿಸಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಸಹ ಆರೋಗ್ಯದ ಕುರಿತು ಸಾಕಷ್ಟು ಉಲ್ಲೇಖವಿದೆ ಈ ಕೆಲ್ಸಕ್ಕೆ ಇಂದು ಮುನ್ನುಡಿ ಬರೆಯಲಾಗತ್ತಿದೆ ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಐ.ಎಂ.ಎಸ್ ಫೌಂಡೇಶನ್ ಟ್ರಸ್ಟೀ ಕೃಷ್ಣ, ಡಾ ಸ್ವಪ್ನ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಂಗಳೂರಿನ ನಿಸರ್ಗ ಸೌಂದರ್ಯವನ್ನು ಕನ್ನಡದಲ್ಲೇ ಹೊಗಳಿದ ಪ್ರಧಾನಿ ಮೋದಿ

ABOUT THE AUTHOR

...view details