ಕರ್ನಾಟಕ

karnataka

ETV Bharat / state

ನೆಲಮಂಗಲದಲ್ಲಿ ಬಾಯ್ಲರ್​​​ ಸ್ವಚ್ಛ ಮಾಡುವಾಗ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ಆರ್ಗ್ಯಾನಿಕ್ ಆರೋಮ್ಯಾಟಿಕ್ಸ್ ಕಂಪನಿಯಲ್ಲಿ ಬಾಯ್ಲರ್​ ಸ್ವಚ್ಛಗೊಳಿಸುವಾಗ ಕಾಲು ಜಾರಿ ಬಿದ್ದು, ಕಾರ್ಮಿಕನೋರ್ವ ಮೃತಪಟ್ಟಿದ್ದಾನೆ. ಕಾರ್ಮಿಕ ಈ ಕೆಲಸ ಮಾಡಲು ಕಂಪನಿಯವರು ಯಾವುದೇ ರೀತಿಯ ಸುರಕ್ಷತಾ ಕಿಟ್‌ಗಳನ್ನು ನೀಡಿರಲಿಲ್ಲ ಎಂದು ತಿಳಿದುಬಂದಿದೆ.

Labor deaths in Organic Aromatics Company
ಬಾಯ್ಲರ್​​​ ಸ್ವಚ್ಛ ಮಾಡುವಾಗ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

By

Published : May 18, 2022, 3:32 PM IST

ನೆಲಮಂಗಲ(ಬೆಂಗಳೂರು): ಕೆಮಿಕಲ್ ಕಂಪನಿಯೊಂದರಲ್ಲಿ ಬಾಯ್ಲರ್ ಸ್ವಚ್ಛ ಮಾಡುವಾಗ ಕಾಲು ಜಾರಿ ಬಿದ್ದು, ಕಾರ್ಮಿಕ ಸ್ಥಳದಲ್ಲೇ ಸಾವಿಗೀಡಾಗಿರುವ ದುರ್ಘಟನೆ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಬರಗೇನಹಳ್ಳಿ ಗ್ರಾಮದ ಸಾಕಪ್ಪ (54) ಮೃತ ವ್ಯಕ್ತಿ. ಈತನು ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದನು ಎನ್ನಲಾಗ್ತಿದೆ.

ಬಾಯ್ಲರ್​​​ ಸ್ವಚ್ಛ ಮಾಡುವಾಗ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ದಾಬಸ್‌ಪೇಟೆ ಸಮೀಪವಿರುವ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಆರ್ಗ್ಯಾನಿಕ್ ಆರೋಮ್ಯಾಟಿಕ್ಸ್ ಕೆಮಿಕಲ್‌ಗೆ ಸಂಬಂಧಪಟ್ಟ ಕಂಪನಿಯಾಗಿದೆ. ಕಂಪನಿಯವರು ಬಾಯ್ಲರ್ ಸ್ವಚ್ಛ ಮಾಡುವಂತೆ ತಿಳಿಸಿದ್ದು, ಆ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ನಂತರ ಆತನ ಮೃತದೇಹವನ್ನು ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ:ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ‌ ಪತ್ತೆ, ಪೋಷಕರಿಂದ ಕೊಲೆ ಆರೋಪ

ಕಾರ್ಮಿಕ ಈ ಕೆಲಸ ಮಾಡಲು ಕಂಪನಿಯವರು ಯಾವುದೇ ರೀತಿಯ ಸುರಕ್ಷತಾ ಕಿಟ್‌ಗಳನ್ನು ನೀಡಿರಲಿಲ್ಲ. ಅಲ್ಲದೇ ಈ ಕಂಪನಿಯು ಕೆಮಿಕಲ್‌ಗೆ ಸಂಬಂಧಪಟ್ಟ ಕಂಪನಿಯಾಗಿರುವುದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಕಾರ್ಮಿಕರಿಗೆ ತಲೆಸುತ್ತುವಂತಹ ಸನ್ನಿವೇಶಗಳು ಆಗಾಗ ನಡೆಯುತ್ತಿವೆ. ಆದ್ರೂ ಕಂಪನಿಯವರು ಮಾತ್ರ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸ್ವಲ್ಪವೂ ಮುತುವರ್ಜಿ ವಹಿಸುತ್ತಿಲ್ಲ ಎಂದು ಕಾರ್ಮಿಕರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details