ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ನಾಳೆ ಬಿಜೆಪಿ ಚಾಲನೆ ನೀಡಲಿದೆ. ವಸಂತ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಜಿಲ್ಲಾ ಮಟ್ಟದಲ್ಲಿ ಸಚಿವರು, ಪ್ರಮುಖ ನಾಯಕರು ಚಾಲನೆ ನೀಡಲಿದ್ದಾರೆ.
ಸಿಎಎ ಬಗ್ಗೆ ಜನಜಾಗೃತಿ: ಮನೆ ಮನೆ ಸಂಪರ್ಕ ಅಭಿಯಾನಕ್ಕೆ ನಾಳೆ ಸಿಎಂ ಚಾಲನೆ!
ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಮನೆ ಮನೆ ಜಾಗೃತಿ ಅಭಿಯಾನಕ್ಕೆ ನಾಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ವಿರುದ್ಧ ಜನವರಿ 20ರವರೆಗೆ ಮನೆ ಮನೆ ಸಂಪರ್ಕ ಅಭಿಯಾನದ ಮೂಲಕ ಬಿಜೆಪಿ ಜಾಗೃತಿ ಮೂಡಿಸಲು ಹೊರಟಿದೆ. ಕಾಯ್ದೆ ಪೌರತ್ವ ಕೊಡುವುದೇ ಹೊರತು ಹಿಂಪಡೆಯುವುದಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಡಲಿದೆ.
ಎಲ್ಲೆಲ್ಲಿ ಯಾರಿಂದ ಅಭಿಯಾನಕ್ಕೆ ಚಾಲನೆ:
- ಬೆಂಗಳೂರು ಕೇಂದ್ರ - ಬಿ.ಎಸ್. ಯಡಿಯೂರಪ್ಪ
- ಹುಬ್ಬಳ್ಳಿ - ಧಾರವಾಡ - ಪ್ರಹ್ಲಾದ ಜೋಶಿ
- ಬೆಂಗಳೂರು ಉತ್ತರ- ಡಿ ವಿ ಸದಾನಂದ ಗೌಡ
- ಬೆಂಗಳೂರು ದಕ್ಷಿಣ - ಸಿ. ಎನ್. ಅಶ್ವಥ್ ನಾರಾಯಣ
- ಬಳ್ಳಾರಿ - ಲಕ್ಷ್ಮಣ್ ಸವದಿ
- ಗದಗ - ಗೋವಿಂದ ಕಾರಜೋಳ
- ಧಾರವಾಡ - ಜಗದೀಶ್ ಶೆಟ್ಟರ್
- ಶಿವಮೊಗ್ಗ - ಕೆ. ಎಸ್. ಈಶ್ವರಪ್ಪ
- ತುಮಕೂರು- ಆರ್. ಅಶೋಕ್
- ಮೈಸೂರು - ಅರವಿಂದ್ ಲಿಂಬಾವಳಿ
- ಚಿಕ್ಕಮಗಳೂರು- ಸಿ.ಟಿ. ರವಿ
- ಬೆಂಗಳೂರು ಕೇಂದ್ರ - ಸೋಮಣ್ಣ
- ಚಿತ್ರದುರ್ಗ- ಶಶಿಕಲಾ ಜೊಲ್ಲೆ
- ಕೊಪ್ಪಳ - ಸಿ. ಸಿ. ಪಾಟೀಲ್
- ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
- ಚಿಕ್ಕಬಳ್ಳಾಪುರ - ಶೋಭಾ ಕರಂದ್ಲಾಜೆ
- ಹಾವೇರಿ - ಶಿವಕುಮಾರ್ ಉದಾಸಿ
- ಬಾಗಲಕೋಟೆ - ಪಿ.ಸಿ. ಗದ್ದಿಗೌಡರ್
- ವಿಜಯಪುರ- ರಮೇಶ್ ಜಿಗಜಿಣಗಿ
- ಬೀದರ್ - ಭಗವಂತ ಕೂಬಾ
- ಚಿಕ್ಕೋಡಿ - ಮಹಾಂತೇಶ್ ಕವಟಗಿ