ಬೆಂಗಳೂರು :ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆ ಆಯ್ತು ಎನ್ನುವಾಗಲೇ ಒಮಿಕ್ರಾನ್ ರೂಪದಲ್ಲಿ ಆರೋಗ್ಯ ಇಲಾಖೆಗೆ 3ನೇ ಅಲೆ ತಲೆ ಕೆಡಿಸಿದೆ. ಕಣ್ಣಿಗೆ ಕಾಣಿಸಿದ ವೈರಸ್ ವಿರುದ್ದ ಹೋರಾಟ ಅನಿರ್ವಾಯವಾಗಿದೆ. ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ಗಡಿದಾಟುತ್ತಿದೆ.
ಅಂದ ಹಾಗೇ ಈ 3ನೇ ಅಲೆಯಲ್ಲಿ ಮಕ್ಕಳೇ ಹೆಚ್ಚು ಟಾರ್ಗೆಟ್ ಆಗುವ ಎಲ್ಲ ಸಾಧ್ಯತೆಗಳು ಇವೆ ಅಂತಾ ತಜ್ಞರು ಈ ಹಿಂದೆಯೇ ತಿಳಿಸಿದ್ದರು. ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಕೋವಿಡ್ ಸೋಂಕಿನ ನಿರ್ವಹಣೆಗಾಗಿ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿಯನ್ನ ರಚನೆ ಮಾಡಲಾಗಿತ್ತು.
ಈ ಸಮಿತಿಯು ಸರ್ಕಾರಕ್ಕೆ ಈ ಹಿಂದೆ ಹಲವು ಶಿಫಾರಸು ಮಾಡಿತ್ತು..
ಸದ್ಯ ಇದೀಗ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗ್ತಿದೆ. ಆದರೆ, ಕೋವಿಡ್ 3ನೇ ಅಲೆಯಿಂದ 18 ವರ್ಷದೊಳಗಿನ ಮಕ್ಕಳು ಬಾಚವ್ ಆಗಿರುವುದಾಗಿ ತಜ್ಞರು ನಡೆಸಿರುವ ಅನಾಲಿಸಿಸ್ ( analysis) ನಲ್ಲಿ ತಿಳಿದು ಬಂದಿದೆ.
ಕೋವಿಡ್-19ನ 2ನೇ ಅಲೆಗೆ ಹೋಲಿಸಿದರೆ 3ನೇ ಅಲೆಯ ಸಮಯದಲ್ಲಿ ಮಕ್ಕಳಿಗಿಂತ ವಯಸ್ಕರಲ್ಲಿ ಹೆಚ್ಚು ಸೋಂಕು ಹರಡುತ್ತಿದೆ. 3ನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಹರಡುವಿಕೆಯು ಕಡಿಮೆಯಾಗಿರುವ ಬಗ್ಗೆ ಸ್ಟೇಟ್ ಕೋವಿಡ್ ವಾರ್ ರೂಂ ರಿಪೋರ್ಟ್ ಕೊಟ್ಟಿದೆ.
ಏಪ್ರಿಲ್ನಲ್ಲಿ 6,50,957 ಮಕ್ಕಳಲ್ಲಿ( 0-18 ವರ್ಷ) ಟೆಸ್ಟಿಂಗ್ ಮಾಡಿದಾಗ 57,442 ಪಾಸಿಟಿವ್ ದೃಢಪಟ್ಟಿತ್ತು. ಪಾಸಿಟಿವ್ ರೇಟ್ 8.82% ರಷ್ಟು ಇತ್ತು. ಅದೇ 19 ವರ್ಷ ಮತ್ತು ಮೇಲ್ಪಟ್ಟ 35,96,500 ವ್ಯಕ್ತಿಗಳಿಗೆ ಟೆಸ್ಟಿಂಗ್ ಮಾಡಿದಾಗ 5,58,614 ಮಂದಿಗೆ ಪಾಸಿಟಿವ್ ಬಂದು ಪಾಸಿಟಿವ್ ರೇಟು 15.53 ರಷ್ಟು ಇತ್ತು.
ಪಾಸಿಟಿವ್ ದರದಲ್ಲಿ ವಯಸ್ಕರ ಪಾಸಿಟಿವಿಟಿ ಮತ್ತು ಮಕ್ಕಳ ನಡುವಿನ ಪಾಸಿಟಿವಿಟಿ ಅನುಪಾತವನ್ನು ವಿಭಿನ್ನವಾಗಿ ಲೆಕ್ಕ ಹಾಕಲಾಗುತ್ತೆ. ಆ ಪೈಕಿ ಮಕ್ಕಳಿಗಿಂತ ವಯಸ್ಕರಲ್ಲಿಯೇ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ.
2&3ನೇ ಅಲೆಯಲ್ಲಿ ಪಾಸಿಟಿವ್ ರೇಟ್ ಹೋಲಿಕೆ