ಬೆಂಗಳೂರು :ಕುಖ್ಯಾತ ಸೈಕೋ ಕಿಲ್ಲರ್ ರಾಜೇಂದ್ರ ಅಲಿಯಾಸ್ ಬೆಂಕಿ ರಾಜನ ವಿರುದ್ಧಕೆ.ಎಸ್ ಲೇಔಟ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಬೆಂಕಿ ರಾಜ ಅಂದ್ರೆ, ಸಿಲಿಕಾನ್ ಸಿಟಿ ಜನರಲ್ಲಿ ವಿಲಕ್ಷಣ ಭಯ ಮನೆಮಾಡಿತ್ತು. ಯಾಕಂದ್ರೆ ಈತ ಅಂಥ ಪಾಶವೀ ಮನಸ್ಥಿತಿಯ ವ್ಯಕ್ತಿಯಾಗಿದ್ದ. 10 ರೂಪಾಯಿಗಾಗಿ ಮನುಷ್ಯತ್ವ ಮರೆತು ವ್ಯಕ್ತಿಯನ್ನು ಸಾಯಿಸಿದ ಆರೋಪ ಈತನ ಮೇಲಿದೆ. ಇದೇ ಮಾರ್ಚ್ 24 ರಂದು ಉತ್ತರಹಳ್ಳಿ ರಸ್ತೆಯ ಕರ್ನಾಟಕ ಬ್ಯಾಂಕ್ ಸೆಕ್ಯೂರಿಟಿ ಲಿಂಗಪ್ಪನನ್ನು ಕೊಲೆಗೈದಿದ್ದು, ಈ ಸಂಬಂಧ ಕೆ.ಎಸ್.ಲೇ ಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು.
ಕುಖ್ಯಾತ ಸೈಕೋ ಕಿಲ್ಲರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಕೃತ್ಯದ ಕುರಿತಾಗಿ ತನಿಖೆ ಆರಂಭಿಸಿದ ಪೊಲೀಸರಿಗೇ ಆಘಾತವಾಗಿದೆ. ಯಾಕಂದ್ರೆ, ದುಡ್ಡಿಗಾಗಿ ಈತ ಒಂಟಿಯಾಗಿ ಅಲೆದಾಡುವವರನ್ನು, ಎಟಿಎಂ ಸೆಕ್ಯೂರಿಟಿ ಗಾರ್ಡ್‌ಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯುವವರನ್ನು ಕೇವಲ 50 ರೂಪಾಯಿಗೂ ಹತ್ಯೆ ಮಾಡಿ ಪರಾರಿಯಾಗುತ್ತಿದ್ದ. ಹಾಗೆಯೇ ತನ್ನ 8ನೇ ವರ್ಷಕ್ಕೆ ಆಕ್ಕನನ್ನೇ ಉರಿಯುತ್ತಿದ್ದ ಬೆಂಕಿಗೆ ತಳ್ಳಿ ಕೊಲೆ ಮಾಡಿದ್ದ ಗಂಭೀರ ಆರೋಪವೂ ಈತನ ಮೇಲಿದೆ.
ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪನ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬೆಂಕಿ ರಾಜ ನಡೆಸಿದ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 150 ಪುಟಗಳುಳ್ಳ ಚಾರ್ಜ್‌ಶೀಟ್ ಸಿದ್ದಪಡಿಸಿ 36 ಜನ ಸಾಕ್ಷಿಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.