ಕರ್ನಾಟಕ

karnataka

ETV Bharat / state

10 ಸಾವಿರ ಜನರಿಗೆ ತರಕಾರಿ ವಿತರಣೆ ಮಾಡಿದ ಬಿಜೆಪಿ ಮುಖಂಡ ಚನ್ನಕೇಶವ

ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೆರವಿಗೆ ದೇವಸಂದ್ರ ಮುಖಂಡ ಚನ್ನಕೇಶವ ಮುಂದಾಗಿದ್ದಾರೆ.

BJP leader
10 ಸಾವಿರ ಜನಕ್ಕೆ ತರಕಾರಿ ವಿತರಣೆ ಮಾಡಿದ ಬಿಜೆಪಿ ಮುಖಂಡ ಚನ್ನಕೇಶವ

By

Published : May 2, 2020, 4:37 PM IST

Updated : May 2, 2020, 6:42 PM IST

ಕೆ.ಆರ್.ಪುರ:5 ಲಕ್ಷ ಮೌಲ್ಯದ 50 ಟನ್ ತರಕಾರಿಯನ್ನು ಬಿಜೆಪಿ ಮುಖಂಡ ಚನ್ನಕೇಶವ ಸುಮಾರು 10 ಸಾವಿರ ಜನರಿಗೆ ವಿತರಣೆ ಮಾಡಿದ್ದಾರೆ.

10 ಸಾವಿರ ಜನರಿಗೆ ತರಕಾರಿ ವಿತರಣೆ ಮಾಡಿದ ಬಿಜೆಪಿ ಮುಖಂಡ ಚನ್ನಕೇಶವ

ಕೆ.ಆರ್.​ಪುರ ಕ್ಷೇತ್ರದ ಬಸವನಪುರ ಹಾಗೂ ದೇವಸಂದ್ರ ವಾರ್ಡ್​ನ ಬಡವರಿಗೆ ನೆರವಾಗಿರುವ ಚನ್ನಕೇಶವ, ಕೋಲಾರ ಹಾಗೂ ಮುಳಬಾಗಿಲಿನಿಂದ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೇರವಾಗಿ ರೈತರಿಂದ 50 ಟನ್ ತರಕಾರಿ ಖರೀದಿ ಮಾಡಿ ಕೆ.ಆರ್.ಪುರಕ್ಕೆ ತಂದಿದ್ದಾರೆ. ತಮ್ಮ ಸ್ನೇಹಿತರು ಹಾಗೂ ಮುಖಂಡರ ಸಹಾಯದಿಂದ ಆಲುಗಡ್ಡೆ, ಈರುಳ್ಳಿ, ಕುಂಬಳಕಾಯಿ, ಸೌತೇಕಾಯಿ, ಎಲೆಕೋಸು, ಕ್ಯಾರೆಟ್, ಬೀಟ್​​​ರೂಟ್, ಟೊಮ್ಯಾಟೊ, ನುಗ್ಗೇಕಾಯಿ, ಕ್ಯಾಪ್ಸಿಕಮ್ ಸೇರಿದಂತೆ 10 ಸಾವಿರ ಕಿಟ್​ಗಳನ್ನು ತಯಾರಿಸಿದ್ದಾರೆ. ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರ ಮೂಲಕ ಬಡವರಿಗೆ ತರಕಾರಿ ಕಿಟ್ ನೀಡುವ ಮೂಲಕ ಚಾಲನೆ ನೀಡಿದರು.

ನಂತರ ಯುವ ಮುಖಂಡ ಚನ್ನಕೇಶವ, ಬಡವರು ಇರುವ ಜಾಗಕ್ಕೆ ಸುಮಾರು 10 ಟಾಟಾ ಏಸ್​ ವಾಹನಗಳ ಮೂಲಕ ತೆರಳಿ ತರಕಾರಿ ವಿತರಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಭೈರತಿ ಬಸವರಾಜ್, ನನ್ನ ಕ್ಷೇತ್ರದಲ್ಲಿ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ನಮ್ಮ ಬಿಜೆಪಿ ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಬಿಜೆಪಿ ಮುಖಂಡರೆಲ್ಲಾ ಒಗ್ಗಟ್ಟಾಗಿ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡಿ ಬಡವರಿಗೆ ತಲುಪಿಸುವ ಮೂಲಕ ಕಷ್ಟ ಕಾಲದಲ್ಲಿ ರೈತರ ಕೈ ಹಿಡಿದು ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಇಂದು 10 ಸಾವಿರ ಜನಕ್ಕೆ ತರಕಾರಿ ಕಿಟ್​ಗಳನ್ನ ವಿತರಿಸುತ್ತಿದ್ದು, ದೇವಸಂದ್ರ ಯುವ ಮುಖಂಡನ ಕಾರ್ಯ ಶ್ಲಾಘನೀಯ ಎಂದರು.

ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕೆ.ಆರ್.ಪುರ ಭಾಗದಲ್ಲಿ 10 ಸಾವಿರ ಬಡವರಿಗೆ ತರಕಾರಿ ಕಿಟ್​ಗಳನ್ನ ವಿತರಿಸುವ ಮೂಲಕ ಬಿಜೆಪಿ ಯುವ ಮುಖಂಡ ಚನ್ನಕೇಶವ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ಈ ಭಾಗದಲ್ಲಿ ಸಾಕಷ್ಟು ಬಡ ಜನರು ಇದ್ದಾರೆ. ಬಡವರಿಗೆ ಸಹಾಯ ಮಾಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬರಬೇಕು ಎಂದರು.

ಬಿಜೆಪಿ ಮುಖಂಡ ಚನ್ನಕೇಶವ‌ ಮಾತನಾಡಿ, ನಮ್ಮ ಕೆ.ಆರ್.ಪುರ ಭಾಗದಲ್ಲಿ ‌ತುಂಬಾ ಕೂಲಿ ಕಾರ್ಮಿಕರು ಇದ್ದಾರೆ. ಬೇರೆ ಬೇರೆ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುವ ಜನರಿದ್ದಾರೆ. ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಜನ ಊಟಕ್ಕೆ ಪರದಾಡುತ್ತಿದ್ದಾರೆ. ಹಾಗಾಗಿ ನಾನು ಜನರ ನೆರವಿಗೆ ಬಂದಿದ್ದೇನೆ. ನಮ್ಮ ಕ್ಷೇತ್ರದ ಜನಪ್ರತಿನಿಧಿಗಳ ಮೂಲಕ ಇಂದು ಐದು ಲಕ್ಷ ಮೌಲ್ಯದ 50 ಟನ್‌ ತರಕಾರಿಗಳನ್ನು 10 ಸಾವಿರ ಜನಕ್ಕೆ 8-10 ಕೆಜಿ ಒಬ್ಬೊಬ್ಬರಿಗೆ ವಿತರಣೆ ಮಾಡಿದ್ದೇವೆ ಎಂದರು.

Last Updated : May 2, 2020, 6:42 PM IST

ABOUT THE AUTHOR

...view details