ಕರ್ನಾಟಕ

karnataka

ETV Bharat / state

ಕೊರೊನಾ ಆತಂಕ: ಹೊಸಕೋಟೆಯ ಪರೀಕ್ಷಾ ಕೇಂದ್ರ ದಿಢೀರ್​ ಬದಲಾವಣೆ

ತಾಲ್ಲೂಕು ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರವನ್ನು ಹೊಸಕೋಟೆಯ ಸಂತೆ ಸರ್ಕಲ್ ಬಳಿ ಇರುವ ಕ್ರೂಟ್ ಮೆಮೋರಿಯಲ್ ಶಾಲೆಯಲ್ಲಿ ನಡೆಸಲು ವ್ಯವಸ್ಥೆ ಮಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದ್ದಾರೆ.

Changed the SSLC exam Centre in hoskote
ಹೊಸಕೋಟೆಯ ಪರೀಕ್ಷೆ ಕೇಂದ್ರ ದಿಢೀರ್​ ಬದಲಾವಣೆ

By

Published : Jun 24, 2020, 11:51 PM IST

ಬೆಂಗಳೂರು: ಹೊಸಕೋಟೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಇರುವ ಕಾರಣ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಲಾಗಿದೆ.

ಹೊಸಕೋಟೆ ನಗರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧ ಎ ಆರ್ ಬಡಾವಣೆಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಸುಮಾರು 341 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಭಾಗದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕರೊನಾ ಸೊಂಕು ಇರುವುದರಿಂದ ಹಾಗೂ ಕಂಟೈನ್ ಮೆಂಟ್ ಜೋನ್ ಘೋಷಣೆ ಮಾಡಿರುವುದರಿಂದ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಲಾಗಿದೆ.

ತಾಲ್ಲೂಕು ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರವನ್ನು ಹೊಸಕೋಟೆಯ ಸಂತೆ ಸರ್ಕಲ್ ಬಳಿ ಇರುವ ಕ್ರೂಟ್ ಮೆಮೋರಿಯಲ್ ಶಾಲೆಯಲ್ಲಿ ನಡೆಸಲು ವ್ಯವಸ್ಥೆ ಮಾಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಹಾಗೂ ಅವರಲ್ಲಿನ ಆತಂಕ ದೂರ ಮಾಡಲು ಈ ಕ್ರಮವನ್ನು ತುರ್ತಾಗಿ ಕೈಗೊಳ್ಳಲಾಗಿದ್ದು, ಎಲ್ಲಾ 341 ವಿದ್ಯಾರ್ಥಿಗಳು ಸೆಂಟ್ ಜೋಸೆಫ್ ಶಾಲೆ ಬದಲಿಗೆ ಸಾಧನ ಚಿತ್ರ ಮಂದಿರ ರಸ್ತೆಯ ಸಂತೆ ಗೇಟ್ ಬಳಿ ಇರುವ ಕ್ರೂಟ್ ಮೆಮೋರಿಯಲ್ ಶಾಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details