ಬೆಂಗಳೂರು :ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿ ನಾಳೆಗೆ ಒಂದು ವರ್ಷ ಮುಗಿಯುವ ಹಿನ್ನೆಲೆ ಹೊಸ ಕಮಿಷನರ್ ಬದಲಾವಣೆ ಸಾಧ್ಯತೆಯಿದೆ. ನಗರ ಪೊಲೀಸ್ ಇಲಾಖೆಗೆ ಸಾರಥಿಯಾಗಿರುವ ಕಮಲ್ ಪಂತ್ ಜಾಗಕ್ಕೆ ನೂತನ ಕಮಿಷನರ್ ನೇಮಕ ಸಾಧ್ಯತೆ ಹಿನ್ನೆಲೆ ಆಯುಕ್ತರ ರೇಸ್‌ನಲ್ಲಿ ನಾಲ್ವರ ಹೆಸರು ಕೇಳಿ ಬಂದಿವೆ.
ರಾಜ್ಯ ಗುಪ್ತಚರ ವಿಭಾಗದ ಬಿ.ದಯಾನಂದ್, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ಹಾಗೂ ರಾಜ್ಯ ಆಡಳಿತ ವಿಭಾಗದ ಎಡಿಜಿಪಿ ಎಂ ಎ ಸಲೀಂ ನಡುವೆ ಪ್ರಬಲ ಪೈಪೋಟಿಯಿದೆ. ಇವರಲ್ಲಿ ಕನ್ನಡಿಗರಾದ ಡಾ.ಎಂ.ಅಬ್ದುಲ್ ಸಲೀಂ ಹಾಗೂ ದಯಾನಂದ್ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ.
1994ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ದಯಾನಂದ್ ಪ್ರಸ್ತುತ ಎಡಿಜಿಪಿಯಾಗಿ ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.