ಕರ್ನಾಟಕ

karnataka

ETV Bharat / state

ಕೋವಿಡ್ ನಿಯಂತ್ರಣ ಕುರಿತು ರಾಜ್ಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ

ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರು ರಾಜ್ಯದ ಸಚಿವರು ಹಾಗೂ ಶಾಸಕರ ಜೊತೆ ಕೊರೊನಾ ಪ್ರಕರಣ ಮತ್ತು ನಿಯಂತ್ರಣ ಕ್ರಮಗಳು ಸಭೆ ನಡೆಸಿದರು. ಈ ವೇಳೆ ದೇಶದ ಮಹಾನಗರಗಳ ಪೈಕಿ ಕೊರೊನಾ ನಿಯಂತ್ರಿಸುವಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Central Minister Sadananda gowda made meeting
ಕೇಂದ್ರ ಸಚಿವ ಡಿವಿಎಸ್​ ನೇತೃತ್ವದಲ್ಲಿ ಸಭೆ

By

Published : May 25, 2020, 7:44 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪ್ರಕರನಗಳು ಮತ್ತು ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಇಂದು ರಾಜ್ಯದ ಸಚಿವರು ಹಾಗೂ ಶಾಸಕರ ಜೊತೆ ಸಭೆ ನಡೆಸಿದರು.

ರಾಜ್ಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದ ಕೇಂದ್ರ ಸಚಿವ ಡಿವಿ ಸದಾನಂದಗೌಡ

ವಿಕಾಸಸೌಧದಲ್ಲಿ ರಾಜ್ಯ ಸಚಿವರ ಹಾಗೂ ಶಾಸಕರ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೈಡ್ರೊಕ್ಲೊರೊಕ್ವಿನ್​, ಪ್ಯಾರಾಸಿಟಮಲ್ ಮಾತ್ರೆಗಳೂ ಅಗತ್ಯಕ್ಕಿಂತ ಹೆಚ್ಚಿವೆ ಎಂದು ತಿಳಿಸಿದರು.

ಕೊರೊನಾ ಪ್ರಕರಣ ಮತ್ತು ನಿಯಂತ್ರಣ ಕ್ರಮಗಳ ಕುರಿತ ಸಚಿವ ಡಿ.ವಿ.ಸದಾನಂದಗೌಡ ಮಾಹಿತಿ

ನಮ್ಮಲ್ಲಿ ಔಷಧ ದಾಸ್ತಾನು ಸಾಕಷ್ಟಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಕೊರೊನಾ ಫಾರ್ಮಸಿ ಸಚಿವನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ದೆಹಲಿಯಿಂದಲೇ ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದೆ. ವಸ್ತುಸ್ಥಿತಿ ಅರಿಯಲು ಸ್ವತಃ ಸಭೆ ನಡೆಸಿದ್ದು, ಕೊರೊನಾ ನಿಯಂತ್ರಿಸುವಲ್ಲಿ ಕರ್ನಾಟಕ ಯಶಸ್ಸು ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ಅದ್ಭುತ ಪ್ರಯತ್ನ ನಮ್ಮಲ್ಲಿ ನಡೆಯುತ್ತಿದೆ:

ಬೇರೆ ರಾಜ್ಯ, ದೇಶದಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು, ಅವರೆಲ್ಲರಿಗೂ ಕ್ವಾರಂಟೈನ್​ ಮಾಡಲಾಗಿದೆ. ರಾಜ್ಯದಲ್ಲಿ ದಾಖಲಾಗಿರುವ 800 ರಿಂದ 900 ಪ್ರಕರಣಗಳು ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

  • ಕೊರೊನಾ ನಿಯಂತ್ರಣದಲ್ಲಿ ರಾಜಧಾನಿ ನಂ.1:

ಕೊರೊನಾ ನಿಯಂತ್ರಿಸುವಲ್ಲಿ ಬೆಂಗಳೂರು ಮಹಾನಗರ ನಂ.1 ಸ್ಥಾನದಲ್ಲಿದೆ. ಇದಕ್ಕೆ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಮಂಜುನಾಥ್ ಮತ್ತು ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

  • ವಲಸಿಗರನ್ನು ಕಳುಹಿಸಲು ನಾವು ಸಿದ್ಧ:

ನಮ್ಮ ರಾಜ್ಯದಲ್ಲಿರುವ ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ಸರ್ಕಾರ ಸಿದ್ಧವಿದೆ. ಆದರೆ ಆಯಾ ರಾಜ್ಯಗಳೂ ಇವರನ್ನು ಬಿಟ್ಟುಕೊಳ್ಳಲು ಒಪ್ಪಬೇಕು. ಹೀಗಾಗಿ ಒಂದಷ್ಟು ಗೊಂದಲ ಇದೆ. ಇದನ್ನು ಪರಿಹರಿಸುತ್ತೇವೆ ಎಂದು ಸಚಿವರು ಹೇಳಿದರು.

  • ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಾಗಿದೆ:

ಕೊರೊನಾ ಪರೀಕ್ಷೆಗಳ ಪ್ರಮಾಣವೂ ಹೆಚ್ಚಿದ್ದು, ಇವುಗಳಿಗೆ ಅಗತ್ಯವಾದ ಪಿಪಿಇ ಕಿಟ್​​ಗಳು ನಮ್ಮಲ್ಲಿವೆ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ, ಸಚಿವರಾದ ಡಾ. ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಶಾಸಕರಾದ ಸತೀಶ್ ರೆಡ್ಡಿ, ವಿಶ್ವನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details