ಬೆಂಗಳೂರು:ಕರ್ನಾಟಕ ಸೇರಿ ಹತ್ತು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಎಲ್ಲ ರಾಜ್ಯಗಳಿಂದಲೂ ನಷ್ಟದ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ವರದಿ ಬಂದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಖಾತೆ ಸಚಿವ ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬವಾಗಿಲ್ಲ. ದೇಶಾದ್ಯಂತ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆರೆ ಆಗಿತ್ತು. ಎಲ್ಲ ರಾಜ್ಯಗಳಿಂದಲೂ ವರದಿ ತರಿಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲೂ ಸಾಕಷ್ಟು ನಷ್ಟ ಆಗಿರುವ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆ. ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು. ರಾಜ್ಯ ಸರ್ಕಾರ ಮೊದಲು ತನ್ನ ಬೊಕ್ಕಸದಿಂದಲೇ ಹಣ ಖರ್ಚು ಮಾಡಿ, ಲೆಕ್ಕ ಕೊಟ್ಟರೆ ಅಷ್ಟೂ ಹಣವನ್ನ ಕೇಂದ್ರ ಸರ್ಕಾರ ಪುನರ್ ಭರಿಸಿಕೊಡುತ್ತದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದರು ಅಕ್ಟೋಬರ್ 31ರ ನಂತರ ಸಾಕಷ್ಟು ಬದಲಾವಣೆಗಳು ಆಗಲಿವೆ. ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಗೆ ರಾಜ್ಯಪಾಲರ ನೇಮಕವಾಗಲಿದೆ. ಕಾಶ್ಮೀರಿಗಳನ್ನು ಸಶಸ್ತ್ರ ದಳಗಳ ವಿವಿಧ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಜಾರಿಯಾಗುತ್ತದೆ. ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ರೈತರಿಗೆ ಲಾಭ ತಂದುಕೊಡಲು ನಫೆಡ್ ಮೂಲಕ ನೇರವಾಗಿ ಕೇಂದ್ರ ಸೇಬು ಬೆಳೆ ಮಾಡಲು ನಿರ್ಧರಿಸಿದೆ ಎಂದರು.
2G,3G,4G, ಸೆಲ್ ಫೋನ್ ದರದ ಬಗ್ಗೆ ಕೆಲ ಬುದ್ದಿ ಜೀವಿಗಳು ಮಾತನಾಡುತ್ತಿದ್ದಾರೆ. ಆದರೆ, ಅಲ್ಲಿ ಈವರೆಗೆ ಮಹಿಳೆ, ಮಕ್ಕಳ ಹಕ್ಕು, ಮಕ್ಕಳ ಶಿಕ್ಷಣ ಹಕ್ಕು ಇರಲಿಲ್ಲ ಎನ್ನುವ ಬಗ್ಗೆ ಮಾತನಾಡಲ್ಲ. ಪುಲ್ವಾಮಾದಲ್ಲಿ ನಮ್ಮ 40 ಸಿಆರ್ಪಿಎಫ್ ಯೋಧರ ಬಲಿದಾನದ ಬಗ್ಗೆ ಮಾತನಾಡಲ್ಲ ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೆಲವು ಕಡೆ ಹಾಕಿರುವ 144 ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ ಭವಿಷ್ಯದ ದಿನಗಳಲ್ಲಿ ಅಮೆರಿಕ - ಭಾರತ ದೇಶಗಳ ನಡುವೆ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ದರು. ಜಾಗತಿಕ ಭಯೋತ್ಪಾದಕತೆ ವಿರುದ್ಧ ಉಭಯ ದೇಶಗಳ ನಾಯಕರು ಸಮರ ಸಾರುವ ಬಗ್ಗೆ ಮಾತಾಡಿದರು. ಇಸ್ಲಾಮಿಕ್ ಭಯೋತ್ಪಾದನೆ, ಗಡಿ ಸಮಸ್ಯೆ ಕುರಿತು ಇಬ್ಬರೂ ಚರ್ಚೆ ನಡೆಸಿದರು ಭಯೋತ್ಪಾದನೆ ವಿರುದ್ಧದ ಇಬ್ಬರ ಸಂಕಲ್ಪ ಇನ್ನಷ್ಟು ಬಲಗೊಂಡಿದೆ ಎಂದರು.