ಬೆಂಗಳೂರು :ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ಸಂಬಂಧ ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ಭೇಟಿ ನೀಡಿದ ಬಳಿಕ ಸಂತ್ರಸ್ತೆ ಪರ ವಕೀಲ ಕೆ ಎನ್ ಜಗದೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂತ್ರಸ್ತೆ ಹೇಳಿದ್ದರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ : ಜಗದೀಶ್ ಸ್ಪಷ್ಟನೆ - ಸಿಡಿ ಲೇಡಿ ಪರ ವಕೀಲ ಜಗದೀಶ್ ಸುದ್ದಿ
ಸಿಆರ್ಪಿಸಿ 161ಅಡಿ ಸಂತ್ರಸ್ತೆಯ ವಿಚಾರಣೆ ಮುಂದುವರೆದಿದೆ. ಆರೋಪಿ ವಿಚಾರಣೆಗೆ ಹಾಜರಾಗಬಹುದು ಎಂದು ನಾನು ಸಹ ಬಂದಿದ್ದೆ. ಆದರೆ, ಆರೋಪಿ ಇಂದು ವಿಚಾರಣೆಗೆ ಹಾಜರಾಗಿಲ್ಲ..
ಜಗದೀಶ್ ಹೇಳಿಕೆ
ಸಿಆರ್ಪಿಸಿ 161ಅಡಿ ಸಂತ್ರಸ್ತೆಯ ವಿಚಾರಣೆ ಮುಂದುವರೆದಿದೆ. ಆರೋಪಿ ವಿಚಾರಣೆಗೆ ಹಾಜರಾಗಬಹುದು ಎಂದು ನಾನು ಸಹ ಬಂದಿದ್ದೆ. ಆದರೆ, ಆರೋಪಿ ಇಂದು ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿಸಿದರು.
ಎಸ್ಐಟಿಯಿಂದ ಜಗದೀಶ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ, ಸಂತ್ರಸ್ತೆ ಹೇಳಿದ್ದರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಹಾಗೇನಾದರೂ ಇದ್ದಲ್ಲಿ ಎಸ್ಐಟಿ ನನಗೆ ನೊಟೀಸ್ ನೀಡಲಿ, ನಾನು ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ ಎಂದು ಹೇಳಿದರು.
Last Updated : Apr 2, 2021, 4:28 PM IST