ಕರ್ನಾಟಕ

karnataka

ETV Bharat / state

ಮೊದಲು ನಾನವನಲ್ಲವೆಂದು ಈಗ ನಾನೇ ಎಂದರಂತೆ.. ರಮೇಶ್‌ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!? - SIT and Ramesh jarkiholi latest news

ತುರ್ತು ಸಂದರ್ಭದಲ್ಲಿ ಆಕೆಯನ್ನು ನನ್ನ ಅಪಾರ್ಟ್ಮೆಂಟ್​ಗೆ ಕರೆಸಿದ್ದೆ. ಈ ವೇಳೆ ಆಕೆಯ ಸಮ್ಮತಿಯೊಂದಿಗೆ ಅವಳ ಜೊತೆ ಸೇರಿದ್ದೆ. ನಾನು ಅತ್ಯಾಚಾರ ಮಾಡಿಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ..

Ramesh Jarkiholi case
Ramesh Jarkiholi case

By

Published : May 24, 2021, 8:01 PM IST

ಬೆಂಗಳೂರು :ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ರಾಸಲೀಲೆ ಪ್ರಕರಣದಲ್ಲಿ ಆ ಯುವತಿ‌ ಜತೆ‌ ಇರುವುದು ತಾನೇ ಎಂದು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಬೆಳಕಿಗೆ ಬಂದ ಮೊದಲ ದಿನದಿಂದಲೂ ಸಿಡಿಯಲ್ಲಿ ಯುವತಿಯೊಂದಿಗೆ ಇರುವುದು ನಾನಲ್ಲ. ಯುವತಿ ಹಾಗೂ ಆಕೆಯ ಗ್ಯಾಂಗ್ ನನ್ನ ಫೋಟೋ ಬಳಸಿಕೊಂಡು ರಾಜಕೀಯ ಅರಾಜಕತೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ಜಾರಕಿಹೊಳಿ ಅವರು ದೂರು ನೀಡಿದ್ದರು.

ಇನ್ನೊಂದೆಡೆ‌ ಸಿಡಿ ಯುವತಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ನನ್ನ ಮೇಲೆ ಆತ್ಯಾಚಾರ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಆಪಾದಿಸಿದ್ದರು‌. ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ ಅಧಿಕಾರಿಗಳು, ಕೊರೊನಾ ಹಿನ್ನೆಲೆ ತನಿಖೆಯನ್ನ ಮಂದಗತಿಯಲ್ಲಿ ನಡೆಸಿದ್ದರು.

ಯು-ಟನ್ ಹೊಡೆದ್ರಾ ಮಾಜಿ ಸಚಿವರು ?

ಪ್ರಕರಣದಲ್ಲಿ ತಮ್ಮ ಕುತ್ತಿಗೆ ಮೇಲೆ ಬರುತ್ತಿದೆ ಎಂದು ಸೂಕ್ಷ್ಮವಾಗಿ ಗ್ರಹಿಸಿದಂತಿರುವ ಮಾಜಿ ಸಚಿವರು, ಎಸ್ಐಟಿ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.

ಯುವತಿಯೊಂದಿಗೆ ಸಿಡಿಯಲ್ಲಿ ಇರುವುದು ನಾನೇ. ಆ ಹುಡುಗಿ ಕೂಡ ನನಗೆ ಪರಿಚಯವಿದೆ. ಪ್ರಾಜೆಕ್ಟ್ ವರ್ಕ್ ಎಂದು ಯುವತಿ ನನ್ನ ಪರಿಚಯ ಮಾಡಿಕೊಂಡಿದ್ದಳು. ಅವಳು ನನ್ನ ನಂಬರ್ ಪಡೆದು ಆಗಾಗ ಫೋನ್ ಮಾಡುತ್ತಿದ್ದಳು.

ತುರ್ತು ಸಂದರ್ಭದಲ್ಲಿ ಆಕೆಯನ್ನು ನನ್ನ ಅಪಾರ್ಟ್ಮೆಂಟ್​ಗೆ ಕರೆಸಿದ್ದೆ. ಈ ವೇಳೆ ಆಕೆಯ ಸಮ್ಮತಿಯೊಂದಿಗೆ ಅವಳ ಜೊತೆ ಸೇರಿದ್ದೆ. ನಾನು ಅತ್ಯಾಚಾರ ಮಾಡಿಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಕ್ಷೇತ್ರದಲ್ಲಿ ಉಲ್ಬಣಿಸಿದ ಕೊರೊನಾ.. 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ‌

ಘಟನೆ ಬಗ್ಗೆ ವಿಡಿಯೋ ಹೇಗೆ ಮಾಡಿದರು ಎಂಬುವುದು ಗೊತ್ತಿಲ್ಲ. ನಾನು ಯುವತಿಗೆ ಯಾವುದೇ ಆಮಿಷವೊಡ್ಡಿಲ್ಲ ಎಂದು ತನಿಖಾಧಿಕಾರಿ ಎಸಿಪಿ ಕವಿತಾ ಮುಂದೆ ಜಾರಕಿಹೊಳಿ ತನ್ನ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details