ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ಕೋರ್ಟ್​​​ಗೆ ಹೋಗ್ತೇವೆ: ವಕೀಲ ಜಗದೀಶ್ ಎಚ್ಚರಿಕೆ

ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ನಾವು ಕೋರ್ಟ್​​ಗೆ ಹೋಗ್ತೇವೆ ಎಂದು ವಕೀಲ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Advocate Jagadish talk about Ramesh Jarkiholi arrest issue, CD case: Advocate Jagadish talk about Ramesh Jarkiholi arrest issue in Bangalore, Ramesh Jarkiholi CD case, Ramesh Jarkiholi CD case news, ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ಕೋರ್ಟ್ ಹೋಗ್ತೇವೆ, ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ಕೋರ್ಟ್ ಹೋಗ್ತೇವೆ ಎಂದ ವಕೀಲ ಜಗದೀಶ್​, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ,
ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ಕೋರ್ಟ್ ಹೋಗ್ತೇವೆ ಎಂದ ವಕೀಲ

By

Published : Apr 1, 2021, 12:24 PM IST

ಬೆಂಗಳೂರು:ಸಿಡಿ ಪ್ರಕರಣದಲ್ಲಿ ಆರೋಪಿತ ಸ್ಥಾನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಇಂದು ಸ್ಥಳದ ಮಹಜರ್ ಮಾಡಲಾಗುತ್ತಿದೆ. ಈ‌ ಪ್ರಕರಣದ ಪ್ರಮುಖ ಪ್ರಕ್ರಿಯೆ ಇದು. ಅಲ್ಲಿ ಎಲ್ಲ ರೀತಿಯ ಸಾಕ್ಷ್ಯಾಧಾರಗಳನ್ನ ಕಲೆಹಾಕಬೇಕಾಗುತ್ತೆ. ಇವತ್ತು ಪ್ರಮುಖ ಪ್ರಕ್ರಿಯೆ ಬಳಿಕವೂ ಆರೋಪಿ ಬಂಧಿಸಲಿಲ್ಲ ಅಂದರೆ ನಾವೂ ಕೋರ್ಟ್ ಮೊರೆ ಹೋಗಬೇಕಾಗುತ್ತೆ. ಜನ ಕೂಡ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಸಿಎಂ ಯಡಿಯೂರಪ್ಪ ಆರೋಪಿ ಬಂಧಿಸುವಂತೆ ಸೂಚಿಸಬೇಕು. ಇಲ್ಲ ಅಂದ್ರೆ ನಾಳೆ ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಕೀಲ ಜಗದೀಶ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಬಂಧಿಸದಿದ್ದರೆ ಕೋರ್ಟ್ ಹೋಗ್ತೇವೆ ಎಂದ ವಕೀಲ

ಎರಡು ದಿನಗಳಿಂದ ಎಸ್​ಐಟಿ ತಂಡ ವಿಚಾರಣೆ ಮಾಡುತ್ತಿದೆ. 164ರಡಿ ಸ್ವ ಹೇಳಿಕೆಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ಸಾಕ್ಷಿಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಯುವತಿಯ ವೈದ್ಯಕೀಯ ಪರೀಕ್ಷೆ‌ ಮುಗಿದಿದೆ. ಆದರೂ ಆರೋಪಿಯನ್ನ ಬಂಧಿಸುವ ಕೆಲಸ ಆಗಿಲ್ಲ. ಮೊದಲು ಆರೋಪಿ ಬಂಧಿಸಿ ಮೆಡಿಕಲ್ ಚಕ್ ಆಪ್ ಆಗಬೇಕಿತ್ತು ಎಂದು ವಕೀಲ ಜಗದೀಶ್​ ಅಸಮಾಧಾನ ವ್ಯಕ್ತಪಡಿಸಿದರು.

ಪೋಷಕರ ಹೇಳಿಕೆಗೂ, ಹೈಕೋರ್ಟ್ ಮೆಟ್ಟಿಲು ಏರಿರೋದು ಅವರ ಇಚ್ಛೆಯಾಗಿದೆ. ಆದರೆ, ಈ ಕೇಸ್​ನಲ್ಲಿ ಯುವತಿಯ ಅಭಿಪ್ರಾಯವೇ ಮುಖ್ಯ. ಪೋಷಕರು ಹೈಕೋರ್ಟ್​ಗೆ ಹೋಗಿರುವುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಪೋಷಕರ ನಡೆ ಬಗ್ಗೆ ಅನುಮಾನ ಮೂಡಿದೆ ಎಂದರು.

ಮೊದಲು ಪೋಷಕರು ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಅದು ಸುಳ್ಳು ಅನ್ನೋದು ಸಾಬೀತು ಆಯ್ತು. ಈಗ ಕೋರ್ಟ್ ಮೊರೆ ಹೋಗಿದ್ದಾರೆ. ಎಲ್ಲೋ ಪೋಷಕರು ಆರೋಪಿಯ ಹಿಡಿತದಲ್ಲಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಆರೋಪಿಯನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸೂರ್ಯ ಮುಕುಂದ್ ಕುಮಾರ್ ಅವರು ವಕೀಲರಾಗಿದ್ದು ಕಾಂಗ್ರೆಸ್ ಪಕ್ಷದವರು ಎಂದು ನಾನು ಕರೆದಿಲ್ಲ. ಅವರನ್ನ ನಾನೇ ಕರೆದಿದ್ದು, ನಾನು ಸಾಕಷ್ಟು ಸೀನಿಯರ್ ಲಾಯರ್ ಕರೆದಿದ್ದೇನೆ. ಅವರ ಸಲಹೆಗಳನ್ನ ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದಕ್ಕೆ ರಾಜಕೀಯ ಹೇಗೆ ಬಂತು ಅನ್ನೋದು ಗೊತ್ತಿಲ್ಲ ಎಂದರು.

ABOUT THE AUTHOR

...view details