ಬೆಂಗಳೂರು: ಡಿಜೆ ಹಳ್ಳಿ ಗಲಭೆ ರೂವಾರಿ ನಾಪತ್ತೆಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.
ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ನೊಟೀಸ್ ಅಂಟಿಸಿದ ಸಿಸಿಬಿ - ಡಿಜೆ ಹಳ್ಳಿ ಗಲಭೆ ರುವಾರಿ
ನಗರದ ಪ್ರೇಜರ್ ಟೌನ್‌ನಲ್ಲಿರುವ ಡಿಜೆ ಹಳ್ಳಿ ಗಲಭೆ ರುವಾರಿ ಸಂಪತ್‌ರಾಜ್ ಮನೆಗಳಿಗೆ ಪ್ರಕರಣದ ತನಿಖಾಧಿಕಾರಿ ಎಸಿಪಿ ವೇಣುಗೋಪಾಲ್ ತಂಡ ಸಿಸಿಬಿ ನೋಟಿಸ್ ಅಂಟಿಸಿದೆ.
ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ ಮನೆಗೆ ನೊಟೀಸ್ ಅಂಟಿಸಿದ ಸಿಸಿಬಿ
ನಗರದ ಪ್ರೇಜರ್ ಟೌನ್‌ನಲ್ಲಿರುವ ಸಂಪತ್‌ರಾಜ್ ಮನೆಗಳಿಗೆ ಪ್ರಕರಣದ ತನಿಖಾಧಿಕಾರಿ ಎಸಿಪಿ ವೇಣುಗೋಪಾಲ್ ತಂಡ ಸಿಸಿಬಿ ನೋಟಿಸ್ ಅಂಟಿಸಿದೆ.
ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ತನಿಖೆಗೆ ಬಂದು ಸಹಕರಿಸಬೇಕು.
ನೋಟಿಸ್ ತಲುಪಿದ ಕೂಡಲೇ ಚಾಮರಾಜ ಪೇಟೆಯಲ್ಲಿರುವ ಕಚೇರಿಗೆ ತನಿಖೆಗೆ ಹಾಜರಾಗಬೇಕು. ಇಲ್ಲದಿದ್ದರೆ ಉದ್ದೇಶ ಪೂರ್ವಕವಾಗಿ ತನಿಖೆಗೆ ಸಹಕಾರ ನೀಡದ ಆರೋಪದಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ನೋಟಿಸ್ ಅಂಟಿಸಿದ್ದಾರೆ.