ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟಿ ರಾಗಿಣಿಗೆ ಸಿಸಿಬಿ ಅಧಿಕಾರಿಗಳ ವಿಚಾರಣೆಯ ಬಿಸಿ ಮುಟ್ಟಿದೆ.
ನಟಿ ರಾಗಿಣಿಗೆ ಮೆಡಿಕಲ್ ಅಸಿಸ್ಟೆನ್ಸ್ ಕೊಡಿಸಿ ತನಿಖೆ ನಡೆಸಲು ಸಿಸಿಬಿ ಸಜ್ಜು - actress Ragini
ನ್ಯಾಯಾಲಯದ ಅನುಮತಿ ಮೇರೆಗೆ 5 ದಿನ ಪೊಲೀಸ್ ಕಸ್ಟಡಿ ಪಡೆದಿರುವ ಅಧಿಕಾರಿಗಳು, ಡ್ರಗ್ ಮಾಫಿಯಾದಲ್ಲಿ ಭಾಗಿಯಾದ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡಿದ್ದು ಇದರ ಆಧಾರದ ಮೇಲೆ ತನಿಖೆ ನಡೆಸಿದ್ದಾರೆ. ರಾಗಿಣಿ ಮೈ-ಕೈ ನೋವು, ಬೆನ್ನು ನೋವು ಇದೆ ಅಂದರೂ ಸಿಸಿಬಿ ಅಧಿಕಾರಿಗಳು ಮೆಡಿಕಲ್ ಅಸಿಸ್ಟೆನ್ಸ್ ಕೊಡಿಸಿ ತನಿಖೆ ನಡೆಸಲು ಸಜ್ಜಾಗಿದ್ದಾರೆ.
ನಟಿ ರಾಗಿಣಿಗೆ ಮೆಡಿಕಲ್ ಅಸಿಸ್ಟೆನ್ಸ್ ಕೊಡಿಸಿ ತನಿಖೆ ನಡೆಸಲು ಸಿಸಿಬಿ ಸಜ್ಜು
3 ದಿನ ಸಿಸಿಬಿ ವಶದಲ್ಲಿದ್ದಾಗ ನಟಿ ರಾಗಿಣಿ ಬೆನ್ನು ನೋವು, ಜ್ವರ ಹಾಗೂ ವೈಯಕ್ತಿಕ ಕಾರಣ ನೀಡಿ ಸಿಸಿಬಿ ಅಧಿಕಾರಿಗಳ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ನ್ಯಾಯಾಲಯದ ಅನುಮತಿ ಮೇರೆಗೆ 5 ದಿನ ಪೊಲೀಸ್ ಕಸ್ಟಡಿ ಪಡೆದಿರುವ ಅಧಿಕಾರಿಗಳು, ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ತನಿಖೆ ನಡೆಸಿದ್ದಾರೆ.
ಇಂದಿನಿಂದ ಸಿಸಿಬಿ ಕೇಳುವ ಒಂದೊಂದು ಪ್ರಶ್ನೆಗೂ ರಾಗಿಣಿ ಉತ್ತರಿಸಬೇಕಾಗಿದೆ. ರಾಗಿಣಿ ಮೈ-ಕೈ ನೋವು, ಬೆನ್ನು ನೋವು ಇದೆ ಅಂದರೂ ಸಿಸಿಬಿ ಅಧಿಕಾರಿಗಳು ಮೆಡಿಕಲ್ ಅಸಿಸ್ಟೆನ್ಸ್ ಕೊಡಿಸಿ ತನಿಖೆ ನಡೆಸಲು ಸಜ್ಜಾಗಿದ್ದಾರೆ.