ಬೆಂಗಳೂರು: ಡ್ರಗ್ಸ್ ಮಾಫಿಯಾ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಸಿಸಿಬಿಯಿಂದ ನಟಿ ರಾಗಿಣಿಗೆ ನೋಟಿಸ್ ನೀಡಿರುವ ಹಿನ್ನೆಲೆ ಸದ್ಯ ಅವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ನೋಟಿಸ್ ತಲುಪಿದ ಕೂಡಲೇ ತಮ್ಮ ವಕೀಲರನ್ನು ದ್ವಿವೇದಿ ಸಂಪರ್ಕಿಸಿರುವ ಮಾಹಿತಿ ಲಭ್ಯವಾಗಿದೆ.
ವಕೀಲರ ಜೊತೆ ತಡರಾತ್ರಿಯೇ ಚರ್ಚೆ ನಡೆಸಿರುವ ರಾಗಿಣಿ ಅವರು ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಏನು ಹೇಳಬೇಕು. ಯಾವ ರೀತಿಯ ಪ್ರಶ್ನೆಗಳು ಉದ್ಭವಿಸಬಹುದು ಎನ್ನುವುದು ಹೀಗೆ ನಾನಾ ಪ್ರಶ್ನೆಗಳಿಗೆ ವಕೀಲರ ಜೊತೆ ತಡ ರಾತ್ರಿವರೆಗೂ ರಾಗಿಣಿ ಚರ್ಚೆ ನಡೆಸಿದ್ದಾರೆ. ಸದ್ಯ ರಾಗಿಣಿ ಆಪ್ತ ರವಿಶಂಕರ್ ಅವರನ್ನ ವಶಕ್ಕೆ ಪಡೆದಿದ್ದು, ರವಿಶಂಕರ್ ಸಿಸಿಬಿ ಪೊಲೀಸರ ಬಳಿ ಹೇಳಿದ ಹೇಳಿಕೆಯಿಂದ ದೂರ ಉಳಿಯಬೇಕಾ, ಬೇಡ್ವಾ ಅನ್ನೋದರ ಬಗ್ಗೆಯೂ ಚರ್ಚೆ ನಡೆಸಿದ್ದಾರೆಂಬ ಮಾಹಿತಿ ಸಿಕ್ಕಿದೆ.